SHOCKING: ವಿದ್ಯಾರ್ಥಿಗಳ ಜೊತೆ ಪೋರ್ನ್ ವಿಡಿಯೋ ನೋಡ್ತಿದ್ದ ವಿದ್ಯಾರ್ಥಿನಿಯರು; ಬೈದ ಪ್ರಾಂಶುಪಾಲರ ಮೇಲೆ ಹಲ್ಲೆ

ಯುಪಿಯ ಡಿಯೋರಿಯಾದಲ್ಲಿರುವ ಇಂಟರ್ ಕಾಲೇಜಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೆಲ  ವಿದ್ಯಾರ್ಥಿಗಳು ಕೊಠಡಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಕುಳಿತು ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋಗಳನ್ನು ವೀಕ್ಷಿಸುತ್ತಿದ್ದುದ್ದು ಬೆಳಕಿಗೆ ಬಂದಿದೆ. ಇದಕ್ಕೆ ಪ್ರಾಂಶುಪಾಲರು ವಿರೋಧ ಮಾಡ್ತಿದ್ದಂತೆ ಬಂದೂಕು ತೋರಿಸಿದ ವಿದ್ಯಾರ್ಥಿಗಳು, ಪ್ರಾಂಶುಪಾಲರಿಗೆ ಥಳಿಸಿದ್ದಾರೆ.

ಮಾಹಿತಿಯ ಪ್ರಕಾರ, ತರಗತಿಯ ಕೆಲವು ವಿದ್ಯಾರ್ಥಿಗಳು ಪೋರ್ನ್‌ ವೀಕ್ಷಣೆ ಮಾಡುತ್ತಿದ್ದರು. ಅಲ್ಲಿಗೆ ಬಂದ ಪ್ರಾಂಶುಪಾಲರು, ವಿದ್ಯಾರ್ಥಿಗಳಿಗೆ ಗದರಿಸಿ, ಮೊಬೈಲ್‌ ತೆಗೆದುಕೊಂಡಿದ್ದಾರೆ. ಆಗ ತಣ್ಣಗಿದ್ದ ವಿದ್ಯಾರ್ಥಿಯೊಬ್ಬ, ಪ್ರಾಂಶುಪಾಲರು ಮನೆಗೆ ತೆರಳುವಾಗ ಅವರ ಮೇಲೆ ದಾಳಿ ನಡೆಸಿದ್ದಾನೆ. ತನ್ನ ಸ್ನೇಹಿತರ ಜೊತೆ ಸೇರಿ ಬೈಕ್‌ ಅಡ್ಡಗಟ್ಟಿ ಪ್ರಾಂಶುಪಾಲರಿಗೆ ಥಳಿಸಿದ್ದಲ್ಲದೆ ಬಂದೂಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಪ್ರಾಂಶುಪಾಲರು ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಯೋರಿಯಾದ ವಿಶುನ್‌ಪುರ ಮಾರುಕಟ್ಟೆಯಲ್ಲಿ ಮಹಂತ್ ತ್ರಿವೇಣಿ ಪರ್ವತ ಇಂಟರ್ ಕಾಲೇಜ್‌ ಇದೆ. ಈ ಕಾಲೇಜು ಅನುದಾನಿತ ಕಾಲೇಜು. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆ ಕಾಲೇಜಿನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ, ಆದ್ದರಿಂದ 40 ಪ್ರತಿಶತ ವಿದ್ಯಾರ್ಥಿಗಳು ಬಿಹಾರದಿಂದ ಇಲ್ಲಿಗೆ ಅಧ್ಯಯನ ಮಾಡಲು ಬರುತ್ತಾರೆ. ಸುಮಾರು 2800 ವಿದ್ಯಾರ್ಥಿಗಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read