BREAKING: ಮೂತ್ರಪಿಂಡ ವೈಫಲ್ಯ, ಪೋಪ್ ಫ್ರಾನ್ಸಿಸ್ ಆರೋಗ್ಯ ಮತ್ತಷ್ಟು ಗಂಭೀರ

ರೋಮ್: ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಫ್ರಾನ್ಸಿಸ್(88) ಅವರ ಆರೋಗ್ಯ ಕ್ಷೀಣಿಸಿದೆ. ಸೌಮ್ಯ ಮೂತ್ರಪಿಂಡ ವೈಫಲ್ಯದ ಲಕ್ಷಣಗಳಿದ್ದು, ತಜ್ಞ ವೈದ್ಯರ ತಂಡ ನಿಗಾವಹಿಸಿದೆ ಎಂದು ವ್ಯಾಟಿಕನ್ ಸಿಟಿಯ ಚರ್ಚ್ ಪ್ರಕಟಣೆಯಲ್ಲಿ ತಿಳಿಸಿದೆ.

ಚರ್ಚ್ ನ ಪ್ರಾರ್ಥನೆ ಹಾಗೂ ಯಾವುದೇ ಆಡಳಿತ ಕಾರ್ಯಕ್ರಮಗಳಲ್ಲಿ ಪೋಪ್ ಫ್ರಾನ್ಸಿಸ್ ಭಾಗಿಯಾಗಿಲ್ಲ. ಅವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಆಮ್ಲಜನಕ ಪೂರೈಸಲಾಗುತ್ತಿದೆ. ರಕ್ತ ಹೀನತೆಯಿಂದಲೂ ಬಳಲುತ್ತಿರುವ ಅವರಿಗೆ ರಕ್ತ ವರ್ಗಾವಣೆ ಮಾಡಲಾಗಿದೆ.

ದೀರ್ಘಕಾಲದಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಅವರನ್ನು ಫೆಬ್ರವರಿ 14ರಂದು ರೋಮ್ ನ ಅಗೋಸ್ಟಿನೋ ಗೆಮಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ತಮ್ಮ ಉತ್ತರಾಧಿಕಾರಿ ನೇಮಕ ಕುರಿತಾಗಿ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read