ಕ್ಯಾನ್ಸರ್‌ ನಿಂದ ಸಾವನ್ನಪ್ಪಿದ ಪೂನಂ ಪಾಂಡೆ ಬಳಿಯಿತ್ತು ಇಷ್ಟೊಂದು ಆಸ್ತಿ….!

ನಟಿ ಹಾಗೂ ರಿಯಾಲಿಟಿ ಶೋ ಬೆಡಗಿ ಪೂನಂ ಪಾಂಡೆ ಸಾವು ಶಾಕ್‌ ನೀಡಿದೆ. ಪೂನಂ ಪಾಂಡೆ ಅಭಿಮಾನಿಗಳು ಆಘಾತಗೊಂಡಿದ್ದಾರೆ. ಕೇವಲ 32 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಪೂನಂ ಪಾಂಡೆಗೆ ಕ್ಯಾನ್ಸರ್‌ ಇತ್ತು ಎನ್ನುವ ವಿಷ್ಯವೇ ಅಭಿಮಾನಿಗಳಿಗೆ, ಬಾಲಿವುಡ್‌ ಗೆ ತಿಳಿದಿರಲಿಲ್ಲ. ಬೆತ್ತಲೆ ಫೋಟೋ ವಿಷ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದ ಪೂನಂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ ರಿಯಾಲಿಟಿ ಶೋನಲ್ಲಿ ಮಿಂಚಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಪೂನಂ ಪಾಂಡೆ ಅದ್ರಿಂದಲೂ ಹಣ ಗಳಿಸ್ತಿದ್ದರು.

ಹಣ ಜೀವ ಉಳಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಪೂನಂ ಪಾಂಡೆ ಇನ್ನೊಂದು ಉದಾಹರಣೆ. ಪೂನಂ ಪಾಂಡೆ, ಸಿನಿಮಾ, ರಿಯಾಲಿಟಿ ಶೋ, ಫೋಟೋ ಶೂಟ್‌, ಮಾಡಲಿಂಗ್‌ ಸೇರಿದಂತೆ ನಾನಾ ವಿಧಗಳಿಂದ ಸುಮಾರು 52 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದರು. ಪೂನಂ ಪಾಂಡೆ ತಮ್ಮದೇ ಒಂದು ಅಪ್ಲಿಕೇಷನ್‌ ಹೊಂದಿದ್ದು, ಅದ್ರಲ್ಲಿ ಅವರು ಸಾಕಷ್ಟು ಫೋಟೋ, ವಿಡಿಯೋಗಳನ್ನು ಪೋಸ್ಟ್‌ ಮಾಡ್ತಿದ್ದರು. ಈ ಅಪ್ಲಿಕೇಷನ್‌ ನಲ್ಲಿ 32 ಲಕ್ಷಕ್ಕೂ ಹೆಚ್ಚು ಪಾವತಿ ಚಂದಾದಾರರಿದ್ದಾರೆ. ಇತ್ತೀಚಿಗೆ ಪೂನಂ ಈ ಅಪ್ಲಿಕೇಷನ್‌ ಮೂಲಕವೇ ಸಾಕಷ್ಟು ಹಣ ಸಂಪಾದನೆ ಮಾಡಿದ್ದರು.

ಪೂನಂ ಪಾಂಡೆ ಮುಂಬೈನಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪೂನಂ ಪಾಂಡೆ ಅವರ ಅಪಾರ್ಟ್ಮೆಂಟ್ ಬಾಂದ್ರಾ ಪ್ರದೇಶದಲ್ಲಿದೆ. ಇದರ ಮೌಲ್ಯ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಪೂನಂ ಪಾಂಡೆ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಅವರ ಬಳಿ  ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಿಎಂಡಬ್ಲ್ಯು ಕಾರು ಇತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read