850 ಕೋಟಿ ರೂ. ಮೌಲ್ಯದ ವಿಕಿರಣಶೀಲ ವಸ್ತು ವಶಕ್ಕೆ ಪಡೆದ ಪೊಲೀಸರು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂಪಾಯಿ ಮೌಲ್ಯದ ಅಪರೂಪದ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಾ ಕಲ್ಲನ್ನು ಬಿಹಾರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಲಿಫೋರ್ನಿಯಂ ಕಲ್ಲನ್ನು ಕಳ್ಳಸಾಗಣೆ ಮಾಡ್ತಿದ್ದ ವೇಳೆ  ಮೂವರನ್ನು ಗೋಪಾಲಗಂಜ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು 50 ಗ್ರಾಂ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಗೋಪಾಲಗಂಜ್ ಎಸ್ಪಿ ಸ್ವರ್ಣ್ ಪ್ರಭಾತ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಬೆಲೆಬಾಳುವ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ನಮಗೆ ನಿರ್ದಿಷ್ಟ ಮಾಹಿತಿ ಸಿಕ್ಕಿತ್ತು. ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೆವು ಎಂದು ಅವರು ಹೇಳಿದ್ದಾರೆ.

ಶಂಕಿತರು ಮೋಟಾರ್‌ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ನಾಲ್ಕು ಮೊಬೈಲ್ ಫೋನ್‌ಗಳು ಮತ್ತು 50 ಗ್ರಾಂ ಕ್ಯಾಲಿಫೋರ್ನಿಯಂ ವಶಕ್ಕೆ ಪಡೆಯಲಾಗಿದೆ.

ಕ್ಯಾಲಿಫೋರ್ನಿಯಮ್ ಅತ್ಯಂತ ದುಬಾರಿ ವಿಕಿರಣಶೀಲ ವಸ್ತುವಾಗಿದ್ದು, ಪ್ರತಿ ಗ್ರಾಂ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 17 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ.

ಉತ್ತರ ಪ್ರದೇಶ ಮೂಲದ ಛೋಟೆ ಲಾಲ್ ಪ್ರಸಾದ್, ಚಂದನ್ ಗುಪ್ತಾ, ಚಂದನ್ ರಾಮ್ ಬಂಧಿತರು. ಎಸ್ಪಿ ಪ್ರಕಾರ, ಕಳ್ಳಸಾಗಣೆದಾರರು ಹಲವಾರು ತಿಂಗಳುಗಳಿಂದ ಈ ಅಮೂಲ್ಯ ವಸ್ತುವನ್ನು ಮಾರಾಟ ಮಾಡುವ ಪ್ಲಾನ್‌ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read