Bengaluru : ಕ್ರಿಕೆಟಿಗ ಕಾರಿಯಪ್ಪ ಪ್ರೇಯಸಿಗೆ ನೋಟಿಸ್ ನೀಡಿದ ಪೊಲೀಸರು

ಬೆಂಗಳೂರು : ಕರ್ನಾಟಕದ ಯುವ ಕ್ರಿಕೆಟಿಗ, ಐಪಿಎಲ್ ಆಟಗಾರ ಕೆ.ಸಿ.ಕಾರಿಯಪ್ಪ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಮೋಸಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದೀಗ ಆ ಯುವತಿಗೆ ಆರ್ ಟಿ ನಗರ ಪೊಲೀಸರು ನೋಟಿಸ್ ನೀಡಿದ್ದಾರೆ.

ಘಟನೆ ಬಗ್ಗೆ ವಿವರ ನೀಡುವಂತೆ ವತಿಗೆ ಆರ್ ಟಿ ನಗರ ಪೊಲೀಸರು ನೋಟಿಸ್ ನೀಡಿದ್ದಾರೆ.ಒಂದೂವರೆ ವರ್ಷದ ಹಿಂದೆ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ನಂತರ ಇಬ್ಬರು ಪರಸ್ಪರ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ ಎಂದು ಆರ್.ಟಿ. ನಗರ ಪೊಲೀಸರು ತಿಳಿಸಿದ್ದಾರೆ.

ಕ್ರಿಕೆಟಿಗ ಕೆ.ಸಿ.ಕಾರಿಯಪ್ಪ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಕೈಕೊಟ್ಟಿದ್ದಾರೆ. ಗರ್ಭಿಣಿಯಾಗುತ್ತಿದ್ದಂತೆ ಬಲವಂತದಿಂದ ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸಿದ್ದಾರೆ. ಈಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕಾರಿಯಪ್ಪ ನನ್ನಿಂದ ಹಂತ ಹಂತವಾಗಿ 2 ಲಕ್ಷ ರೂ. ಹಣ ಪಡೆದಿದ್ದಾರೆ. ಇದುವರೆಗೂ ನನ್ನನ್ನು ಮದುವೆಯಾಗಿಲ್ಲ ಎಂದು ಯುವತಿ ಆರ್,ಟಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಕಾರಿಯಪ್ಪ ಕೂಡ ದೂರು ನೀಡಿದ್ದು, ಇಬ್ಬರೂ ಪ್ರೀತಿಸಿ ಸುತ್ತಾಡಿದ್ದೇವೆ. ಆದರೆ ಮಹಿಳೆ ಮದ್ಯವ್ಯಸನಿಯಾಗಿದ್ದಾಳೆ. ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಅವಳಿಂದ ದೂರ ಇದ್ದೆ, ನನ್ನ ಕ್ರಿಕೆಟ್ ಜೀವನ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಕಾರಿಯಪ್ಪ ದೂರು ನೀಡಿದ್ದಾರೆ .

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read