ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಠಾಣೆ ಪೋಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ವೇಳೆ ಅಮಾಯಕರನ್ನು ತಡೆದು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸಿದ್ದಾರೆ.

ತರೀಕೆರೆ -ಅಜ್ಜಂಪುರ ಮಾರ್ಗದಲ್ಲಿ ರಾತ್ರಿ ವೇಳೆ ಪ್ರಯಾಣಿಕರನ್ನು ತಡೆದು ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಭದ್ರಾವತಿ ನಿವಾಸಿಗಳಾದ ಮಹಮ್ಮದ್ ಸಾಬಿತ್, ನಜರುಲ್ಲ, ಜಿಶಾನ್, ಮನ್ಸೂರ್, ಸನ್ಮಾನ್ ಪಾಷಾ, ಶಾಹಿದ್, ನಸರುಲ್ಲಾ ಎಂಬುವರನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆ ವೇಳೆ ಸೊಹೇಲ್ ಮತ್ತು ರೋಷನ್ ಎಂಬವರು ಪರಾರಿಯಾಗಿದ್ದಾರೆ.

ಬಂಧಿತರಿಂದ ಒಂದು ನಾಡ ಪಿಸ್ತೂಲ್, ಮೂರು ಬಡಿಗೆ, ಎರಡು ಲಾಂಗ್, ಒಂದು ರಾಡ್, ಕಾರದ ಪುಡಿ, ಹಗ್ಗ, ಕಾರು ವಶಕ್ಕೆ ಪಡೆಯಲಾಗಿದೆ.

ಅಮೃತಾಪುರ ಕ್ರಾಸ್ ಸಮೀಪ ಅಂಗಡಿ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ತಂಡ ಕೈಯಲ್ಲಿ ರಾಡು, ಲಾಂಗು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ತರೀಕೆರೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಿಎಸ್ಐ ಕೃಷ್ಣ ನಾಯ್ಕ, ನಾಗೇಂದ್ರ ನಾಯ್ಕ್, ಎಎಸ್ಐ ರವಿ, ಸಿಬ್ಬಂದಿ ಬಾಬು, ಲೋಕೇಶ, ಶರತ್, ಮಂಜಪ್ಪ, ರವಿಕುಮಾರ್, ರಿಯಾಜ್, ರುದ್ರೇಶ್, ಗಿರೀಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read