ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿರುವುದಾಗಿ ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚನೆ: ಮೂವರು ಅರೆಸ್ಟ್

ಶಿವಮೊಗ್ಗ: ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚಿಸಿದ್ದ ಮೂವರನ್ನು ಶಿವಮೊಗ್ಗದ ಜಯನಗರ ಮತ್ತು ಸಿಇಎನ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ನಿವಾಸಿ ಇಬ್ರಾಹಿಂ ಬಾದಷಾ(26), ಕುಮಾರಸ್ವಾಮಿ ಲೇಔಟ್  ನಿವಾಸಿ ಜನಾರ್ದನ(21), ಹನುಮಂತ(38) ಬಂಧಿತರು. ಬಂಧಿತರಿಂದ 1500 ರೂ. ನಗದು ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗದ ಕೋಟೆ ಗಂಗೂರು ನಿವಾಸಿ ಪ್ರದೀಪ್ ಗೆ ಚಿಕ್ಕಮಗಳೂರು ಪೊಲೀಸರ ಹೆಸರಿನಲ್ಲಿ ಕಳೆದ ಭಾನುವಾರ ಆರೋಪಿಗಳು ಕರೆ ಮಾಡಿದ್ದಾರೆ. ಮಹಿಳೆಯೊಬ್ಬರಿಗೆ ನೀವು ಅಶ್ಲೀಲ ಸಂದೇಶ ಕಳುಹಿಸಿದ್ದೀರಿ ಎಂದು ಹೇಳಿ ಹೆದರಿಸಿದ್ದು, ನಂತರ ಫೋನ್ ಪೇ ಮೂಲಕ 23 ಸಾವಿರ ರೂಪಾಯಿ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಬಗ್ಗೆ ಪ್ರದೀಪ್ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read