ಬಾಕಿ ಕೇಳಿದ ಮಹಿಳೆ ಮೇಲೆ ಪೊಲೀಸ್‌ ಪೇದೆಯಿಂದ ಹಲ್ಲೆ; UP ಯ ವಿಡಿಯೋ ವೈರಲ್

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸಾಕೇತ್ ಕಾಲೋನಿಯ ಶಿವ ಅಮುಲ್ ಡೈರಿಯಲ್ಲಿ ಕಾನ್‌ಸ್ಟೆಬಲ್‌ ಓರ್ವ, ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮಹಿಳೆ, ಪೊಲೀಸ್‌ ಪೇದೆಯಿಂದ ಬಾಕಿ ಪಾವತಿಸುವಂತೆ ಕೇಳಿದಾಗ ವಾಗ್ವಾದ ಆರಂಭವಾಗಿದ್ದು, ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್‌ ಆಗಿದೆ. ಪೇದೆಯ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಮಹಿಳೆ ಶಿವ ಅಮುಲ್ ಡೈರಿಯಲ್ಲಿ ಪೇದೆ ಬಳಿಗೆ ಬಂದಿದ್ದು, ಆತ ತನಗೆ ನೀಡಬೇಕಾಗಿದ್ದ ಹಣ ಪಾವತಿಗೆ ಮನವಿ ಮಾಡಿದ್ದಾರೆ. ಈ ವಿಚಾರ ವಿಕೋಪಕ್ಕೆ ತಿರುಗಿದ್ದು ಪೇದೆ ಆಕ್ರಮಣಕಾರಿ ವರ್ತನೆ ತೋರಿದ್ದಾನೆ. ಅಲ್ಲದೇ ಪೊಲೀಸ್ ಪೇದೆ, ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು ಇದು ವೈರಲ್‌ ಆಗಿದೆ. ಇದನ್ನು ವೀಕ್ಷಿಸಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಖಂಡನೆ ವ್ಯಕ್ತಪಡಿಸಿದ್ದಾರಲ್ಲದೇ ಪೇದೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಘಟನೆ ಸ್ಥಳೀಯ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನು ಪಾಲನೆಗೆ ಒಪ್ಪಿಸಲ್ಪಟ್ಟವರು ಉನ್ನತ ಗುಣಮಟ್ಟದ ನಡವಳಿಕೆಯನ್ನು ಹೊಂದಿರಬೇಕು ಎಂದು ಹಲವರು ಹೇಳಿದ್ದಾರೆ.

ವ್ಯಾಪಕ ಟೀಕೆಗೆ ಪ್ರತಿಕ್ರಿಯೆಯಾಗಿ, ಸ್ಥಳೀಯ ಅಧಿಕಾರಿಗಳು ಘಟನೆಯನ್ನು ಒಪ್ಪಿಕೊಂಡಿದ್ದು ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಆತ ಕರ್ತವ್ಯ ಲೋಪ ಎಸಗಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read