ಬೆಂಗಳೂರು: ಬೆಂಗಳೂರಿನ ಪಶ್ಚಿಮ ವಿಭಾಗದಲ್ಲಿ ಪೊಲೀಸರು ಬಾರ್ ಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಅಪರಿಚಿತರು ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪಶ್ಚಿಮ ವಿಭಾಗದಲ್ಲಿ 148 ಬಾರ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪರಿಚಿತರು ಪಿಎಸ್ ಐ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಚಂದ್ರಾಲೇಔಟ್ ನ ವೆಸ್ಟ್ ವೀವ್ ಬಾರ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಪರಿಚಿತರ ತಂಡ ಪಿಎಸ್ ಐ ರವೀಶ್, ಪಿಸಿ ಸಿದ್ದಪ್ಪ ಮೇಲೆ ಹಲ್ಲೆ ನಡೆಸಿದೆ.
ಮೊಬೈಲ್ ಕಸಿದುಕೊಂಡು ಮುಖಕ್ಕೆ ಹೊಡೆದಿದೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.