ಜೊತೆಯಾಗಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿಗೆ ಕಿರುಕುಳ ನೀಡಿ ಮತೀಯ ಗೂಂಡಾಗಿರಿ: ನಾಲ್ವರು ಅರೆಸ್ಟ್

ಮಂಗಳೂರು: ಮಂಗಳೂರು ನಗರದ ಪಣಂಬೂರು ಬೀಚ್ ನಲ್ಲಿ ಜೊತೆಯಾಗಿದ್ದ ಮುಸ್ಲಿಂ ಯುವಕ, ಹಿಂದು ಯುವತಿಗೆ ಕಿರುಕುಳ ನೀಡಿ ಮತೀಯ ಗೂಂಡಾಗಿರಿ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕ ಪಿಲಾತಬೆಟ್ಟು ಗ್ರಾಮದ ಪ್ರಶಾಂತ್ ಭಂಡಾರಿ, ಬೆಳ್ತಂಗಡಿ ತಾಲ್ಲೂಕು ಕರಾಯದ ಪಿ. ಉಮೇಶ್, ಪುತ್ತಿಲದ ಸುಧೀರ್, ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ ಬಂಧಿತರು. ಆರೋಪಿಗಳ ವಿರುದ್ಧ ಅಕ್ರಮಕೂಟ ರಚನೆ, ಯುವಕ, ಯುವತಿ ತಡೆದು ಅಡ್ಡಿಪಡಿಸಿದ್ದು, ಉದ್ದೇಶಪೂರ್ವಕ ಅವಮಾನ, ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಿಸಿದ್ದು, ಕರೆದಾಗ ಠಾಣೆಗೆ ಹಾಜರಾಗಲು ಸೂಚಿಸಲಾಗಿದೆ. ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಿಟ್ಟು ಕಳಿಸಲಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಯುವತಿ ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ. ಕೆಲಸದ ನಿಮಿತ್ತ ಮಲ್ಪೆಗೆ ಹೋಗಲು ಬಂದಿದ್ದ ಅವರು ಪರಿಚಯವಿದ್ದ ಯುವಕನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿದ್ದರಿಂದ ಅಭಿನಂದನೆ ಸಲ್ಲಿಸಲು ಪಣಂಬೂರು ಬೀಚ್ ನಲ್ಲಿ ಭೇಟಿಯಾಗಿದ್ದಾರೆ. ಆಗ ಯುವಕರ ಗುಂಪು ಅಡ್ಡ ಗಟ್ಟಿ, ಬೈದಾಡಿದ್ದಾರೆ. ಇದನ್ನು ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read