ಮತ್ತೆ ವೈರಲ್‌ ಆದ ಸ್ಪೈಸ್‌ ಜೆಟ್ ಪೈಲಟ್: ಕಾವ್ಯಾತ್ಮಕ ಘೋಷಣೆಗೆ ನೆಟ್ಟಿಗರು ಫಿದಾ

ಸ್ಪೈಸ್‌ ಜೆಟ್ ಪೈಲಟ್ ಒಬ್ಬರು ಕೆಲ ದಿನಗಳ ಹಿಂದೆ ಅವರ ಕಾವ್ಯಾತ್ಮಕ ಪ್ರಕಟಣೆಗಳಿಗಾಗಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದರು. ಆದಾಗ್ಯೂ, ಇದು ಅವರ ಖ್ಯಾತಿಯ ಅಂತ್ಯವಾಗಿರಲಿಲ್ಲ. ಪೈಲಟ್‌ನ ಪ್ರಾಸಬದ್ಧ ಪ್ರಕಟಣೆಗಳು ಮತ್ತೊಮ್ಮೆ ಇಂಟರ್ನೆಟ್‌ನ ಗಮನ ಸೆಳೆದಿವೆ.

ಪೈಲಟ್ ಮೋಹಿತ್ ತಿಯೋಟಿಯಾ ಹಾಸ್ಯದಿಂದ ತುಂಬಿದ ಅವರ ಕಾವ್ಯಾತ್ಮಕ ಘೋಷಣೆಗಾಗಿ ಮತ್ತೆ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಹಿಂದೆ ವೈರಲ್ ಆದ ಪದಗಳಿಗಿಂತ ಈ ಬಾರಿ ಅವರ ಪ್ರಾಸಗಳು ಸ್ವಲ್ಪ ವಿಭಿನ್ನವಾಗಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತೊಂದು ವಿಡಿಯೋದಲ್ಲಿ, ಟಿಯೋಟಿಯಾ ವಿಮಾನದ ಹಜಾರದಲ್ಲಿ ನಿಂತು ಘೋಷಣೆಯನ್ನು ಮಾಡುವುದನ್ನು ಕಾಣಬಹುದು.

ಅವರ ಪ್ರಕಟಣೆಯಲ್ಲಿ, “ಜರಾ ಡೆನ್ ಫೆಫ್ಡಾನ್ ಕೋ ಆರಾಮ್ ಔರ್ ನಾ ಕರೆನ್ ಧೂಮ್ರಪಾನ್, ವಾರ್ನಾ ದಾಂಡ್ನಿಯಾ ಹೋ ಸಕ್ತಾ ಹೈ ಅಂಜಾಮ್” ಎಂದು ಹೇಳುವುದನ್ನು ಕೇಳಬಹುದು. ಇದರ ಅರ್ಥ ಇಷ್ಟೇ. ಹಾರಾಟದ ಸಮಯದಲ್ಲಿ ಧೂಮಪಾನ ಮಾಡದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ, ಇಲ್ಲದಿದ್ದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ 243 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 21 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read