ಬದಲಾಯ್ತು ‘ಪ್ರಧಾನಿ’ ಪ್ರೊಫೈಲ್ ಫೋಟೋ ; ಎಲ್ಲರೂ ‘ತ್ರಿವರ್ಣ ಧ್ವಜ’ದ ಡಿಪಿ ಹಾಕುವಂತೆ ಮೋದಿ ಕರೆ

ಬರುವ ಆಗಸ್ಟ್ 15 ರಂದು ಭಾರತ 78 ನೇ ಸ್ವಾತಂತ್ರ್ಯ ದಿನವನ್ನ ಆಚರಿಸಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡುವಂತೆ ರಾಷ್ಟ್ರದ ನಾಗರಿಕರನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೊಫೈಲ್ ಚಿತ್ರ ಬದಲಾಯಿಸಿಕೊಂಡು ತ್ರಿವರ್ಣ ಧ್ವಜ ಫೋಟೋ ಹಾಕಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲರೂ ತಮ್ಮ ಪ್ರೊಫೈಲ್ ಚಿತ್ರವನ್ನು ಅದೇ ರೀತಿ ಬದಲಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಅಲ್ಲದೇ ಹರ್ ಘರ್ ತಿರಂಗ ಅಭಿಯಾನದಲ್ಲಿ ಭಾಗವಹಿಸಿ ಪ್ರತಿಯೊಬ್ಬರೂ ರಾಷ್ಟ್ರಧ್ವಜದೊಂದಿಗೆ ತಮ್ಮ ಸೆಲ್ಫಿಗಳನ್ನು https://hargartiranga.com ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

“ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವಂತೆ, ಮತ್ತೊಮ್ಮೆ #HarGharTiranga ಅನ್ನು ಸ್ಮರಣೀಯ ಸಾಮೂಹಿಕ ಆಂದೋಲನವಾಗಿ ಮಾಡೋಣ. ನಾನು ನನ್ನ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿಕೊಂಡಿದ್ದು ಈ ಮೂಲಕ ನನ್ನೊಂದಿಗೆ ನೀವೂ ಸೇರಲು ನಾನು ನಿಮ್ಮನ್ನು ಕೋರುತ್ತೇನೆ. ನಿಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳಿ.” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಗಸ್ಟ್ 11 ರಿಂದ ರಾಷ್ಟ್ರದಾದ್ಯಂತ ‘ಹರ್ ಘರ್ ತಿರಂಗ’ ಅಭಿಯಾನವನ್ನು ಪ್ರಾರಂಭಿಸಲು ಸಜ್ಜಾಗಿದೆ. ಕೇಂದ್ರದ ಆಡಳಿತ ಪಕ್ಷವು ಆಗಸ್ಟ್ 11 ರಿಂದ ಆಗಸ್ಟ್ 14 ರವರೆಗೆ ತಿರಂಗಾ ಯಾತ್ರೆಯನ್ನು ನಡೆಸಲಿದೆ. ಈ ಅವಧಿಯಲ್ಲಿ ರಾಷ್ಟ್ರಧ್ವಜ ಪ್ರತಿ ಮನೆ, ಅಂಗಡಿ ಮತ್ತು ಕಚೇರಿಯ ಮೇಲೆ ಹಾರಿಸಲಾಗುತ್ತದೆ. ಈ ವೇಳೆ ಸ್ವಚ್ಛತಾ ಅಭಿಯಾನವೂ ನಡೆಯಲಿದೆ.

ಜುಲೈ 28 ರಂದು 112 ನೇ ‘ಮನ್ ಕಿ ಬಾತ್’ ನಲ್ಲಿ, ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ಭಾಗವಹಿಸುವಂತೆ ಎಲ್ಲಾ ಭಾರತೀಯರಿಗೆ ಕರೆ ನೀಡಿದರು. ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು. ಮನೆ, ಕಚೇರಿ, ಅಂಗಡಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಒತ್ತಾಯಿಸಿದರು. ‘ಹರ್ ಘರ್ ತಿರಂಗ’ ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿರುವ ಅಭಿಯಾನವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read