ಪ್ರಧಾನಿ ಮೋದಿ ರೋಡ್ ಶೋ ವೇಳೆ ಆಂಬ್ಯುಲೆನ್ಸ್‌ ಗೆ ದಾರಿ ಮಾಡಿಕೊಟ್ಟ ಬೆಂಗಾವಲು ವಾಹನ | VIDEO

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಡೆದ ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸ್ವಲ್ಪ ಸಮಯದವರೆಗೆ ನಿಧಾನವಾಯಿತು.

 ‘ಆಪರೇಷನ್ ಸಿಂಧೂರ್’ ನಂತರ ಪ್ರಧಾನಿ ಮೋದಿ ಒಡಿಶಾಗೆ ಮೊದಲ ಭೇಟಿ ನೀಡುತ್ತಿರುವುದರಿಂದ ನಗರದಲ್ಲಿ ರೋಡ್ ಶೋ ನಡೆಸಲಾಯಿತು. ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ರ್ಯಾಲಿ ನಡೆಸಿದ ಜನತಾ ಮೈದಾನದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದರು.

ರೋಡ್ ಶೋ ನಡೆಯುವಾಗ ಪ್ರಧಾನಿ ಮೋದಿ ಅವರ ಬೆಂಗಾವಲು ವಾಹನ ವೇಗವನ್ನು ಕಡಿಮೆ ಮಾಡಿ ಆಂಬ್ಯುಲೆನ್ಸ್ ಹಾದುಹೋಗಲು ದಾರಿ ಮಾಡಿಕೊಟ್ಟಿತು. ಆಂಬ್ಯುಲೆನ್ಸ್ ಹಾದುಹೋದ ನಂತರ ಬೆಂಗಾವಲು ವಾಹನ ಮತ್ತೆ ಪ್ರಯಾಣ ಮುಂದುವರಿಸಿತು.

ಶುಕ್ರವಾರ, ಪ್ರಧಾನಿ ಮೋದಿ ಒಡಿಶಾದಲ್ಲಿ 18,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 105 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾಷಿಂಗ್ಟನ್‌ಗೆ ಭೇಟಿ ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನವನ್ನು ನಿರಾಕರಿಸಿದ್ದೇನೆ. ಬದಲಾಗಿ ಜಗನ್ನಾಥನ ಪವಿತ್ರ ಭೂಮಿಯಾದ ಒಡಿಶಾಗೆ ಬರಲು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read