ದೇಶದ ಅಭಿವೃದ್ಧಿಗೆ ಜನ ಮತ್ತೆ ಅವಕಾಶ ನೀಡಿದ್ದಾರೆ: ಮೋದಿ ವಿಜಯೋತ್ಸವ ಭಾಷಣ

ನವದೆಹಲಿ: ಈ ಜಯ ಲೋಕ ತಂತ್ರದ ಜಯವಾಗಿದೆ. ದೇಶದ ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಈ ಸಂದರ್ಭದಲ್ಲಿ ವಿಜಯೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿ, ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸದ ಜಯವಾಗಿದೆ. ನಿರಂತರವಾಗಿ ಎನ್.ಡಿ.ಎ.ಗೆ ಮೂರನೇ ಬಾರಿಗೆ ಗೆಲುವು ದೊರಕಿಸಿಕೊಟ್ಟ ದೇಶದ ಜನತೆಗೆ ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೂ ಅಭಿನಂದನೆ ಸಲ್ಲಿಸಿದ ಮೋದಿ, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬದಲ್ಲಿ ಎನ್.ಡಿ.ಎ. ಪರ ನಿಂತ ದೇಶದ ಜನತೆಗೆ ಧನ್ಯವಾದ ಹೇಳುತ್ತೇನೆ. ಎನ್.ಡಿ.ಎ.ಗೆ ಐತಿಹಾಸಿಕ ಜನಾದೇಶ ಸಿಕ್ಕಿದೆ. ಜಮ್ಮು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದೆ. ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎನ್​ಡಿಎ ಸಾಧನೆ ಮಾಡಿದೆ. ಬಿಹಾರದಲ್ಲಿ ನಿತೀಶ್ ಎನ್.ಡಿ.ಎ. ಗೆಲುವಿಗೆ ಕಾರಣರಾಗಿದ್ದಾರೆ. ಜಮ್ಮು ಕಾಶ್ಮೀರ, ಕೇರಳದಲ್ಲಿಯೂ ಬಿಜೆಪಿ ಸಾಧನೆ ಮಾಡಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿಯೂ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಕೆಲವಡೆ ಕ್ಲೀನ್ ಸ್ವಿಪ್ ಮಾಡಲಾಗಿದೆ. ಇಂತಹ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read