Photo: ಪೋಲೆಂಡ್ ನಲ್ಲಿ ಭರ್ಜರಿ ಸ್ವಾಗತ ಸ್ವೀಕರಿಸಿದ ಮೋದಿಯಿಂದ ಮಕ್ಕಳೊಂದಿಗೆ ‘ಸಂವಾದ’

ವಾರ್ಸಾ(ಪೋಲೆಂಡ್): ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಪೋಲೆಂಡ್‌ ಗೆ ಆಗಮಿಸಿದ್ದಾರೆ.

“ಮೋದಿ, ಮೋದಿ” ಘೋಷಣೆಗಳನ್ನು ಕೂಗಿದ ಭಾರತೀಯ ಸಮುದಾಯದ ಸದಸ್ಯರಿಂದ ಅವರಿಗೆ ಆತ್ಮೀಯ ಸ್ವಾಗತ ದೊರೆತಿದೆ. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಭಾರತೀಯ ಡಯಾಸ್ಪೊರಾ ಸದಸ್ಯರು ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು. ಪ್ರಧಾನಿಯವರು ಸಭಿಕರತ್ತ ಕೈಬೀಸಿ ಅಲ್ಲಿದ್ದ ಕೆಲವರಿಗೆ ಹಸ್ತಲಾಘವ ಮಾಡಿದರು. ಭಾರತೀಯ ಸಮುದಾಯದ ಸದಸ್ಯರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿ “ಭಾರತ್ ಮಾತಾ ಕಿ ಜೈ” ಘೋಷಣೆಗಳನ್ನು ಕೂಗಿದ್ದಾರೆ.

ವರ್ಣರಂಜಿತ ಭಾರತೀಯ ಉಡುಪುಗಳನ್ನು ಧರಿಸಿದ್ದ ಕಲಾವಿದರ ಪ್ರದರ್ಶನವನ್ನು ಅವರು ವೀಕ್ಷಿಸಿದರು. ಪ್ರಧಾನ ಮಂತ್ರಿಗಳು ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಕಲಾವಿದರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ವಾರ್ಸಾದ ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಪ್ರಧಾನಿ ಮೋದಿ ಮತ್ತು ಅವರ ತಾಯಿಯ ಫೋಟೋವನ್ನು ತಂದಿದ್ದ ವಾರ್ಸಾದಲ್ಲಿರುವ ಭಾರತೀಯ ಡಯಾಸ್ಪೊರಾ ಸದಸ್ಯೆ ಪ್ರಿಯಾಂಕಾ ಪಟೇಲ್ ಅವರು ಸಹಿ ಪಡೆದುಕೊಂಡಿದ್ದಾರೆ.

ನನಗೆ ತುಂಬಾ ಸಂತೋಷವಾಗಿದೆ. ಅವರು ಫೋಟೋಗೆ ಸಹಿ ಮಾಡಿದರು. ಅವರು ನನ್ನ ರಾಖಿಯನ್ನೂ ಸ್ವೀಕರಿಸಿದರು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದಕ್ಕೂ ಮುನ್ನ ವಾರ್ಸಾ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಯಿತು. ಪೋಲೆಂಡ್‌ಗೆ ಬಂದಿಳಿದೆ. ಇಲ್ಲಿನ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹಕ್ಕೆ ವೇಗವನ್ನು ನೀಡುತ್ತದೆ ಮತ್ತು ನಮ್ಮ ರಾಷ್ಟ್ರಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ ಮತ್ತು ಪೋಲೆಂಡ್ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಸ್ಮರಿಸುತ್ತಿರುವುದರಿಂದ ಈ ಭೇಟಿಗೆ ವಿಶೇಷ ಮಹತ್ವವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಮೋದಿ ಅವರು ತಮ್ಮ ಪೋಲಿಷ್ ಕೌಂಟರ್ ಮತ್ತು ಅಧ್ಯಕ್ಷರೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಭಾರತೀಯ ಸಮುದಾಯದವರನ್ನು ಭೇಟಿ ಮಾಡಲಿದ್ದಾರೆ. ನವನಗರದ ಜಾಮ್ ಸಾಹೇಬ್ ಅವರ ಸ್ಮಾರಕಕ್ಕೆ ಪ್ರಧಾನಿ ಪುಷ್ಪಾರ್ಚನೆ ಮಾಡಲಿದ್ದಾರೆ.

ಅವರು ಮಾಂಟೆ ಕ್ಯಾಸಿನೊ ಕದನದ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ಈ ಸ್ಮಾರಕವು 1944 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಮಾಂಟೆ ಕ್ಯಾಸಿನೊ ಕದನದಲ್ಲಿ ಎರಡನೇ ಪೋಲಿಷ್ ಕಾರ್ಪ್ಸ್ನ ಸೈನಿಕರ ವಿಜಯವನ್ನು ಸ್ಮರಿಸುತ್ತದೆ.

https://twitter.com/narendramodi/status/1826257828279189976

https://twitter.com/narendramodi/status/1826238827436081520

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read