BIG NEWS: ಅಮೆರಿಕದಲ್ಲಿ ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ ಪ್ರಧಾನಿ ಮೋದಿ ನೇತೃತ್ವದ ಯೋಗ ದಿನಾಚರಣೆ

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜರುಗಿದ ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನೆಸ್ ದಾಖಲೆ ಬರೆದಿದೆ.

ಯೋಗ ಕಾರ್ಯಕ್ರಮವು ಹಲವು ರಾಷ್ಟ್ರದ ಜನರು ಒಟ್ಟಾಗಿ ಯೋಗ ಮಾಡಿದ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ. ಇಂದಿನ ಯೋಗದಿನಾಚರಣೆಯಲ್ಲಿ ಒಟ್ಟಿಗೆ 135 ರಾಷ್ಟ್ರಗಳು ಭಾಗವಹಿಸಿದ್ದು ಈ ಹಿಂದೆ ದಾಖಲಾಗಿದ್ದ 114 ರಾಷ್ಟ್ರಗಳ ಸಾಮೂಹಿಕ ಯೋಗಾಭ್ಯಾಸದ ದಾಖಲೆಯನ್ನ ಹಿಂದಿಕ್ಕಿದೆ.

ಅಂತಾರಾಷ್ಟ್ರೀಯ ಯೋಗ ದಿನದಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ಮುನ್ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ತಮ್ಮ 2 ನೇ ದಿನದ ಪ್ರವಾಸ ಪ್ರಾರಂಭಿಸಿದ್ದರು. ನಂತರ ಅವರು ವಾಷಿಂಗ್ಟನ್‌ಗೆ ತೆರಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read