ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನ ಒಡಿಶಾಕ್ಕೆ ಆಗಮಿಸಿ ಐಐಎಂ-ಸಂಬಲ್ಪುರದ ಹೊಸ ಕ್ಯಾಂಪಸ್ ಸೇರಿದಂತೆ 68,400 ಕೋಟಿ ರೂ.ಗಳ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಜಾರ್ಸುಗುಡ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಧಾನಿ ಮೋದಿ, ಐಐಎಂ-ಸಂಬಲ್ಪುರ ಕ್ಯಾಂಪಸ್ ಗೆ ತೆರಳಿದರು, ಅಲ್ಲಿ ಸಿಎಂ ನವೀನ್ ಪಟ್ನಾಯಕ್, ರಾಜ್ಯಪಾಲ ರಘುಬರ್ ದಾಸ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಜೊತೆ ಭಾಗಿಯಾದರು. 400 ಕೋಟಿ ರೂ.ಗಳ ಕ್ಯಾಂಪಸ್ ಜೊತೆಗೆ, ಮೋದಿ 68,000 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಿದರು.
ಗುವಾಹಟಿಗೆ ತೆರಳುವ ಮೊದಲು ಮಧ್ಯಾಹ್ನ 3 ಗಂಟೆ ಸುಮಾರಿಗೆ ರೆಮೆಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಿದರು. “ಒಡಿಶಾದ ವಿಕಾಸ ಯಾತ್ರೆಗೆ ಇಂದು ಬಹಳ ಮಹತ್ವದ ದಿನ. ತಮ್ಮ ರಾಜ್ಯಕ್ಕೆ ಸಮರ್ಪಿಸಲಾದ ಸುಮಾರು 70,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಒಡಿಶಾದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.
#WATCH | Odisha: Prime Minister Narendra Modi flags off the Puri-Sonepur passenger train, virtually.
He also inaugurated and laid the foundation stone of 18 projects worth Rs 68,000 crores, in Sambalpur. pic.twitter.com/iSNsAAVSX0
— ANI (@ANI) February 3, 2024