ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ರಷ್ಯಾ ಪ್ರವಾಸ ಕೈಗೊಂಡಿದ್ದು, ಸೋಮವಾರ ಅವರು ಆಗಮಿಸಿದ್ದಾರೆ. ಭಾರತ – ರಷ್ಯಾ ವಾರ್ಷಿಕ ಸಭೆ ನಿಮ್ಮಿತ್ತ ಆಗಮಿಸಿರುವ ನರೇಂದ್ರ ಮೋದಿಯವರು ತಮ್ಮ ಈ ಪ್ರವಾಸದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ.
ಸೋಮವಾರ ರಷ್ಯಾಗೆ ಬಂದಿಳಿದ ಅವರನ್ನು ಉಪ ಪ್ರಧಾನಿ ಡೆನ್ನಿಸ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ರಷ್ಯಾ ಕಲಾವಿದರು ರಾಜಸ್ತಾನಿ ಜಾನಪದ ಹಾಡು ಹಾಗೂ ನೃತ್ಯದ ಮೂಲಕ ಸ್ವಾಗತಿಸಿದ್ದಾರೆ. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಲ್ಲದೆ ರಷ್ಯಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಭಾರತೀಯ ಸಮುದಾಯದವರು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಹರ್ಷ ವ್ಯಕ್ತಪಡಿಸಿದ್ದು, ಇದೇ ಸಂದರ್ಭದಲ್ಲಿ ಅಲ್ಲಿನ ಭಾರತೀಯ ದೂತವಾಸ ಕಚೇರಿ ಮೋದಿಯವರ ಜೊತೆಗೆ ಭಾರತೀಯ ಮೂಲದವರ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.
https://twitter.com/ANI/status/1810287078841741657?ref_src=twsrc%5Etfw%7Ctwcamp%5Etweetembed%7Ctwterm%5E1810287078841741657%7Ctwgr%5E91caa25e377389761c3382152b4547b9ada61051%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fpmmodigetsrousingwelcomeatmoscowgreetedwithrangilomarodholnaperformancevideo-newsid-n621183955
https://twitter.com/ANI/status/1810294561950032026?ref_src=twsrc%5Etfw%7Ctwcamp%5Etweetembed%7Ctwterm%5E1810294561950032026%7Ctwgr%5E91caa25e377389761c3382152b4547b9ada61051%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fpmmodigetsrousingwelcomeatmoscowgreetedwithrangilomarodholnaperformancevideo-newsid-n621183955