ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಿಂದ 4 ದಿನಗಳ ಕಾಲ ಥಾಯ್ಲೆಂಡ್ ಮತ್ತು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.
ಏಪ್ರಿಲ್ 3, 4 ರಂದು ಥಾಯ್ಲೆಂಡ್ ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಬಿಮ್ ಸ್ಟೆಕ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಥಾಯ್ಲೆಂಡ್ ಗೆ ನೀಡುತ್ತಿರುವ ಮೂರನೇ ಭೇಟಿಯಾಗಿದೆ.
ತಮ್ಮ ಈ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಥಾಯ್ಲೆಂಡ್ ಪ್ರಧಾನಿ ಪೆಂಟೊಗ್ಟರ್ನ್ ಶಿನಾವಾತ್ರಾ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಇದರೊಂದಿಗೆ 6ನೇ ಬಿಮ್ ಸ್ಟೆಕ್ ಸಮ್ಮೇಳನದಲ್ಲಿ ಭಾಗವಹಿಸಿ ಸದಸ್ಯ ರಾಷ್ಟ್ರಗಳೊಂದಿಗೆ ಕಡಲ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.
ಸಮ್ಮೇಳನದಲ್ಲಿ ಮೋದಿ ಅವರು ನೇಪಾಳ ಪ್ರಧಾನಿ ಕೆ.ಪಿ. ಓಲಿ ಶರ್ಮಾ, ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್ ಅವರನ್ನು ಕೂಡ ಭೇಟಿಯಾಗಲಿದ್ದಾರೆ.
ಏಪ್ರಿಲ್ 5 ಮತ್ತು 6 ರಂದು ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ. ಶ್ರೀಲಂಕಾದಿಂದ ತಮಿಳುನಾಡಿನ ರಾಮೇಶ್ವರಂಗೆ ಆಗಮಿಸಲಿರುವ ಅವರು ಪಾಂಬನ್ ರೈಲು ಸೇತುವೆ ಉದ್ಘಾಟಿಸಲಿದ್ದಾರೆ.
PM Modi departs for Thailand to attend 6th BIMSTEC Summit
Read @ANI | Story https://t.co/zR4MEpY80A#PMModi #India #Thailand #BIMSTEC pic.twitter.com/eAdnWvzlzk
— ANI Digital (@ani_digital) April 3, 2025