ಪ್ರಥಮ ಪ್ರಜೆಗೇ ಈ ರೀತಿ ಆದ್ರೆ ಸಾಮಾನ್ಯ ಪ್ರಜೆಯ ಪಾಡೇನು..? ವಿವಾದಕ್ಕೆ ಕಾರಣವಾಯ್ತು ರಾಷ್ಟ್ರಪತಿ ಎದುರು ಕುಳಿತಿದ್ದ ಪ್ರಧಾನಿ ಮೋದಿ ನಡೆ

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಅನಾರೋಗ್ಯದ ಕಾರಣ ನವದೆಹಲಿಯ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ ರಾಷ್ಟ್ರಪತಿಗಳು ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡೆ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರಪತಿಗಳು ಅಡ್ವಾಣಿಯವರಿಗೆ ಭಾರತ ರತ್ನ ಪ್ರದಾನ ಮಾಡುವಾಗ ಪಕ್ಕದಲ್ಲಿಯೇ ನರೇಂದ್ರ ಮೋದಿ ಕುಳಿತಿದ್ದಾರೆ. ಇನ್ನು ಫೋಟೋ ತೆಗೆಯುವಾಗ ರಾಷ್ಟ್ರಪತಿಗಳು ನಿಂತಿದ್ದು ಮೋದಿ ಕುಳಿತುಕೊಂಡಿದ್ದಾರೆ.

ಇದಕ್ಕೆ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ದೇಶದ ಪ್ರಜಾ ಪ್ರಥಮ ಪ್ರಜೆಗೆ ಈ ಗತಿಯಾದರೆ ಸಾಮಾನ್ಯ ಪ್ರಜೆಯ ಪಾಡೇನು? ಇದು ಸರ್ವಾಧಿಕಾರಿ ಧೋರಣೆ ಎಂದೆಲ್ಲ ಅಭಿಪ್ರಾಯ ವ್ಯಕ್ತವಾಗಿದೆ.

https://www.facebook.com/share/bcfD1t43QUYzqojx/?mibextid=oFDknk

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read