ಕಲ್ಯಾಣ ಕರ್ನಾಟಕ ಜನತೆಗೆ ಸಿಹಿ ಸುದ್ದಿ: ಒಂದು ಲಕ್ಷ ಉದ್ಯೋಗದ ಪಿಎಂ ಮಿತ್ರ ಪಾರ್ಕ್ ಗೆ ಇಂದು ಚಾಲನೆ

ಬೆಂಗಳೂರು: ಪ್ರಧಾನಮಂತ್ರಿಯವರ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ರೀಜನ್ ಮತ್ತು ಅಪೆರಲ್ ಪಾರ್ಕ್ -ಪಿಎಂ ಮಿತ್ರ ಕಲಬುರ್ಗಿಯಲ್ಲಿ 1000 ಎಕರೆ ಪ್ರದೇಶದಲ್ಲಿ 1,800 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ.

ಇಂದು ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಸಚಿವರಾದ ಪಿಯೂಷ್ ಗೋಯೆಲ್ ಅವರು ಪಿಎಂ ಮಿತ್ರ ಪಾರ್ಕ್ ಗೆ ಚಾಲನೆ ನೀಡಲಿದ್ದಾರೆ.

10,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ನಿರೀಕ್ಷೆ ಹೊಂದಿರುವ ಈ ಮಹತ್ತರ ಯೋಜನೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ 1 ಲಕ್ಷ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಸುವ ಜೊತೆಗೆ ಐದು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆ ಇದೆ. ನೂಲಿನಿಂದ ಫ್ಯಾಷನ್ ವರೆಗೆ ಸಂಪೂರ್ಣ ಜವಳಿ ಮೌಲ್ಯ ಸರಣಿಯನ್ನು ಇದು ಒಳಗೊಂಡಿದ್ದು, ಜೊತೆಗೆ ನೂಲುಗಾರಿಕೆ ನೀತಿ ತಾಂತ್ರಿಕ ಜವಳಿ ವಲಯಗಳಿಗೆ ವಿಶೇಷ ಒತ್ತು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read