PM Employment Scheme: ಸ್ವಂತ ‘ಬ್ಯುಸಿನೆಸ್’ ಶುರು ಮಾಡ್ಬೇಕು ಅಂದ್ಕೊಡಿದ್ದೀರಾ..? ಇಲ್ಲಿದೆ ಸುವರ್ಣಾವಕಾಶ

ಮಡಿಕೇರಿ : ಸ್ವಂತವಾಗಿ ಏನಾದರೂ ಬ್ಯುಸಿನೆಸ್ (business) ಶುರು ಮಾಡ್ಬೇಕು ಅಂದ್ಕೊಡಿದ್ದೀರಾ..ಹಾಗಾದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ.

ಹೌದು, 2023-24 ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (Prime Minister Employment Creation Scheme ಕಾರ್ಯಕ್ರಮದಡಿಯಲ್ಲಿ ಉತ್ಪಾದನಾ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಲ್ಲಾ ವರ್ಗದ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸುವ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ (Subsidy) ನೀಡಲಾಗುವುದು.

ಕಾಫಿ ಗ್ರೈಂಡಿಂಗ್, ಪ್ಲೋರ್ ಮಿಲ್, ಸಿಮೆಂಟ್ ಬ್ಲಾಕ್ಸ್, ವರ್ಮಿ ಕಾಂಪೋಸ್ಟ್, ಜೇನು ಕೃಷಿ, ಎಣ್ಣೆ ತಯಾರಿಕೆ, ರಬ್ಬರ್, ಪಶು ಆಹಾರ, ಜ್ಯೂಸ್ ತಯಾರಿಕೆ, ರೆಡಿಮೇಡ್ ಗಾರ್ಮೆಂಟ್ಸ್, ಫ್ಲಕ್ಸ್ ಅಂಡ್ ಪ್ರಿಂಟಿಂಗ್ ಪ್ರೆಸ್, ಬ್ಯೂಟಿ ಪಾರ್ಲರ್, ಸಲೂನ್, ಎಕ್ಸ್-ರೇ ಸ್ಕ್ಯಾನಿಂಗ್, ಮೆಡಿಕಲ್, ಲ್ಯಾಬ್, ಡೆಂಟಲ್ ಲ್ಯಾಬ್, ಅಡಿಕೆ ಮತ್ತು ಪೇಪರ್ ಪ್ಲೇಟ್ಸ್, ಶಾಮಿಯಾನ, ಸೆಂಟ್ರಿಂಗ್ ವಕ್ರ್ಸ್, ಎಂಜಿನಿಯರಿಂಗ್ ವರ್ಕ್ಸ್, ವೆಲ್ಡಿಂಗ್, ವಾಟರ್ ಸರ್ವೀಸ್ ಸ್ಟೇಷನ್, ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಮಾಂಸಹಾರಿ ಹೋಟೆಲ್ ಮತ್ತು ಇತರೆ 630 ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲ ಸಹಾಯಧನ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಎಚ್.ಆರ್.ರಾಮಕೃಷ್ಣ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ ಮಡಿಕೇರಿ, ಕೊಡಗು ಜಿಲ್ಲೆ ಇವರ ಕಚೇರಿ ಹಾಗೂ ದೂ.ಸಂ.08272-225946, 9480825630 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎಚ್.ಆರ್.ರಾಮಕೃಷ್ಣ ಅವರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read