ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ‘ಪಕ್ಷ ನಿಧಿ’ಯಾಗಿ 2,000 ರೂಪಾಯಿಗಳನ್ನು ದೇಣಿಗೆ ನೀಡಿದ್ದು, ಎಲ್ಲರೂ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.
NaMo ಅಪ್ಲಿಕೇಶನ್ ಮೂಲಕ ‘ರಾಷ್ಟ್ರ ನಿರ್ಮಾಣಕ್ಕಾಗಿ ದೇಣಿಗೆ’ ಅಭಿಯಾನದ ಭಾಗವಾಗುವಂತೆ ನಾಗರಿಕರಗೆ ಕೋರಿದ್ದಾರೆ.
ಬಿಜೆಪಿಗೆ ಕೊಡುಗೆ ನೀಡಲು ಮತ್ತು ವಿಕ್ಷಿತ್ ಭಾರತವನ್ನು ನಿರ್ಮಿಸಲು ನಮ್ಮ ಪ್ರಯತ್ನಗಳನ್ನು ಬಲಪಡಿಸಲು ನನಗೆ ಸಂತೋಷವಾಗಿದೆ. NaMoApp ಮೂಲಕ #DonationForNationBuilding ನ ಭಾಗವಾಗಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ ಎಂದು ಪಕ್ಷಕ್ಕೆ ನೀಡಿದ ದೇಣಿಗೆಯ ರಸೀದಿಯೊಂದಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ದೇಣಿಗೆ ಅಭಿಯಾನವನ್ನು ಮಾರ್ಚ್ 1 ರಂದು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಾರಂಭಿಸಿದರು, ಅವರು ಪಕ್ಷಕ್ಕೆ 1,000 ರೂ. ದೇಣಿಗೆ ನೀಡಿದ್ದಾರೆ.
2022-2023ರ ಆರ್ಥಿಕ ವರ್ಷದಲ್ಲಿ ಬಿಜೆಪಿ 719 ಕೋಟಿ ರೂಪಾಯಿಗಳ ನಿಧಿಯನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ಬಹಿರಂಗಪಡಿಸಿವೆ. ಇದು ಹಿಂದಿನ ವರ್ಷಕ್ಕಿಂತ 17 ಪ್ರತಿಶತ ಏರಿಕೆಯಾಗಿದೆ. 2021-2022ರಲ್ಲಿ ಪಕ್ಷ 614 ಕೋಟಿ ರೂಪಾಯಿ ದೇಣಿಗೆ ಪಡೆದಿತ್ತು.
I am happy to contribute to @BJP4India and strengthen our efforts to build a Viksit Bharat.
I also urge everyone to be a part of #DonationForNationBuilding through the NaMoApp! https://t.co/hIoP3guBcL pic.twitter.com/Yz36LOutLU
— Narendra Modi (@narendramodi) March 3, 2024