ದೀಪಿಕಾಳಂತೆ ಬಿಕಿನಿ ತೊಟ್ಟು ‘ಬೇಷರಮ್’​ಗೆ ನರ್ತಿಸಿದ​ ಪ್ಲಸ್​ ಸೈಜ್​ ಮಹಿಳೆ: ವಿಡಿಯೋ ವೈರಲ್​

ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಿತ್ರದ ‘ಬೇಷರಂ ರಂಗ್’ ಹಾಡು ಭಾರಿ ವಿವಾದ ಸೃಷ್ಟಿಸಿದ್ದು, ಈ ಹಾಡಿನಿಂದ ಚಿತ್ರವನ್ನೇ ಬಾಯ್ಕಾಟ್​ ಮಾಡಲಾಗುತ್ತಿದೆ. ದೀಪಿಕಾ ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣದ ಬಿಕಿನಿ ತೊಟ್ಟು ಬೇಷರಮ್​ ರಂಗ್​ ಎಂದು ಹೇಳಿರುವುದು ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.

ಅದೇನೆ ಇರಲಿ, ಈಗ ವಿಷಯ ಏನು ಎಂದರೆ, ಇಲ್ಲೊಬ್ಬಳು ದೀಪಿಕಾಳನ್ನು ಮೀರಿಸುವಂತೆ ಈ ಹಾಡಿಗೆ ನೃತ್ಯ ಮಾಡಿದ್ದು ಭಾರಿ ವೈರಲ್​ ಆಗಿದೆ. ತನ್ವಿ ಗೀತಾ ರವಿಶಂಕರ್ ಅವರು ಹಾಡಿರುವ ಬೇಷರಮ್​ ರಂಗ್ ​ಗೆ ದೀಪಿಕಾಳಂತೆಯೇ ಬಿಕಿನಿ ತೊಟ್ಟು ನೃತ್ಯ ಮಾಡಿರುವ ಇಡಿಯೋ ಇದಾಗಿದೆ.

ಆದರೆ ಇಲ್ಲಿ ಒಂದು ವ್ಯತ್ಯಾಸವೆಂದರೆ ದೀಪಿಕಾ ಜೀರೋ ಸೈಜ್​ ಆಗಿದ್ದರೆ, ಈ ವೈರಲ್​ ವಿಡಿಯೋದಲ್ಲಿ ಇರುವ ಮಹಿಳೆ ಪ್ಲಸ್​ ಪ್ಲಸ್​ ಸೈಜ್​ನವಳು. ಬಿಕಿನಿ ತೊಟ್ಟು ದೀಪಿಕಾಳಂತೆ ತನ್ನ ಅಂಗಾಂಗ ಪ್ರದರ್ಶಿಸುತ್ತಾ ನೃತ್ಯ ಮಾಡಿ ಅದನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದಾಳೆ. ಇದಕ್ಕೆ ಸಿಕ್ಕಾಪಟ್ಟೆ ಕಮೆಂಟ್​ಗಳು ಬರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read