ಪತ್ನಿಯಿಂದ ಮಾರಣಾಂತಿಕ ಹಲ್ಲೆ; ಸಹಾಯಕ್ಕಾಗಿ ಪೊಲೀಸರ ಮೊರೆ ಹೋದ ಪತಿ | Watch

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲೋಕೇಶ್ ಎಂಬ ವ್ಯಕ್ತಿ, ತನ್ನ ಪತ್ನಿಯಿಂದ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೋದಲ್ಲಿ, ಮಹಿಳೆಯು ತನ್ನ ಪತಿಯನ್ನು ಪದೇ ಪದೇ ಹೊಡೆಯುತ್ತಿರುವುದು ಕಂಡು ಬಂದಿದೆ. ಆಕೆಯ ಕ್ರೌರ್ಯವನ್ನು ತಡೆಯಲು ಮತ್ತೊಬ್ಬ ಮಹಿಳೆ ಪ್ರಯತ್ನಿಸಿದರೂ, ಆಕೆ ಮಾತ್ರ ತನ್ನ ಹಲ್ಲೆಯನ್ನು ಮುಂದುವರೆಸಿದ್ದಾಳೆ. ಲೋಕೇಶ್‌ನ ಮುಖಕ್ಕೆ ಕಾಲಿನಿಂದ ಒದ್ದು, ಆತನ ಅಂಗಿಯನ್ನು ಹಿಡಿದುಕೊಂಡು ಥಳಿಸಿದ್ದಾಳೆ.

ಲೋಕೇಶ್ ಅವರು ಪನ್ನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ಔಪಚಾರಿಕ ದೂರು ಸಲ್ಲಿಸಿ, ತಮ್ಮ ಪತ್ನಿಯಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಹಲ್ಲೆಯ ವಿಡಿಯೋವನ್ನು ಸಾಕ್ಷ್ಯವಾಗಿ ನೀಡಿದ್ದಾರೆ. ತನಗೆ ಸಹಾಯ ಮಾಡುವಂತೆ ಪೊಲೀಸರಲ್ಲಿ ಅಂಗಲಾಚಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಿಗರು ಆಕ್ರೋಶ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ಅನ್ಯಾಯದ ಕಾನೂನುಗಳನ್ನು ಟೀಕಿಸಿದ್ದಾರೆ. ಪುರುಷರ ಮೇಲಿನ ದೌರ್ಜನ್ಯವನ್ನು ತಡೆಯಲು ಲಿಂಗ ತಟಸ್ಥ ಕಾನೂನುಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

“ಸರ್ಕಾರವು ಲಿಂಗ ತಟಸ್ಥ ಕಾನೂನುಗಳನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ಮದುವೆಯಾಗದೇ ಒಂಟಿಯಾಗಿರುವುದೇ ಉತ್ತಮ” ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ಮಾನವ ಹಕ್ಕುಗಳ ಕಾರ್ಯಕರ್ತರು ಎಲ್ಲಿ?” ಎಂದು ಪ್ರಶ್ನಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read