ಬೆಂಗಳೂರು : ದಯವಿಟ್ಟು ವಿಷ ಕೊಡಿ ಎಂದು ಕೋರ್ಟ್ ಗೆ ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ನಿತ್ಯ ನರಕದರ್ಶನ್ ಆಗುತ್ತಿದೆ. ಒಂದು ಮನವಿ ಇದೆ. ಬಿಸಿಲು ನೋಡಿ 1 ತಿಂಗಳಾಯಿತು. ದಯವಿಟ್ಟು ನನಗೆ ಸಲ್ಪ ವಿಷ ಕೊಡಿ ಎಂದು ಕೋರ್ಟ್ ಗೆ ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ನಟ ದರ್ಶನ್ ದಿಂಬು, ಹಾಸಿಗೆ ನೀಡುವಂತೆ ಕೋರ್ಟ್’ಗೆ ಮನವಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಯುವ ವೇಳೆ ನಟ ದರ್ಶನ್ ಜಡ್ಜ್’ಗೆ ನನಗೆ ದಯವಿಟ್ಟು ವಿಷ ನೀಡಿ ಎಂದು ಮನವಿ ಸಲ್ಲಿಸಿದರು. ಆಗ ಜಡ್ಜ್ ಹಾಗೆಲ್ಲಾ ಮಾತನಾಡಬಾರದು ಎಂದು ತಿಳಿ ಹೇಳಿದರು.
ಇಂದು ಮಧ್ಯಾಹ್ನ 3 ಗಂಟೆಗೆ ನಟ ದರ್ಶನ್ ಮನವಿಯ ಆದೇಶವನ್ನು ಕೋರ್ಟ್ ಪ್ರಕಟಿಸಲಿದೆ. ಮನೆ ಊಟ, ದಿಂಬು ಹಾಸಿಗೆ ಕೋರಿ ನಟ ದರ್ಶನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಹಾಗೂ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಆದೇಶ ಕೂಡ ಇಂದು ಕೋರ್ಟ್ ಪ್ರಕಟಿಸಲಿದೆ.