Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ

Plane passenger throws £5,000 in cash at 'boyfriend' on runway after 'drunken row'

ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ 5 ಸಾವಿರ ಪೌಂಡ್ ಮೌಲ್ಯದ ನಗದನ್ನು ಎಸೆದಿದ್ದಾಳೆ.

ಸೆಪ್ಟೆಂಬರ್ 30 ರಂದು ಹೀಥ್ರೂ ನಿಂದ ಬ್ಯಾಂಕಾಕ್‌ಗೆ ಹೊರಟಿದ್ದ EVA ಏರ್ ವಿಮಾನದಲ್ಲಿ ಇಬ್ಬರೂ ತೀವ್ರವಾಗಿ ಜಗಳವಾಡಿದ್ದಾರೆ. ಈ ವೇಳೆ ವಿಮಾನವನ್ನು ಬೇರೆಡೆಗೆ ತಿರುಗಿಸಬೇಕಾಯಿತು ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ.

ಅವರಿಬ್ಬರೂ ಜೋರಾಗಿ ಗಲಾಟೆ ಮಾಡುತ್ತಿರುವುದರಿಂದ ಇತರ ಪ್ರಯಾಣಿಕರ ಸುರಕ್ಷತೆಯ ಕಾರಣಗಳಿಗಾಗಿ ಆಸ್ಟ್ರಿಯಾದ ವಿಯೆನ್ನಾದಲ್ಲಿ ವಿಮಾನ ಇಳಿಸುವುದಾಗಿ ಪ್ರಯಾಣಿಕರಿಗೆ ಪೈಲಟ್ ಹೇಳಿದರು.

ನಂತರ ಜೋಡಿಯನ್ನು ವಿಮಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಏರ್ ಪೋರ್ಟ್ ನ ರನ್ ವೇನಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ ಹಣವನ್ನು ಎಸೆದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.

EVA ಏರ್‌ನ ಹೇಳಿಕೆಯಲ್ಲಿ “ಫ್ಲೈಟ್‌ನಲ್ಲಿ ಆಕ್ಷೇಪಾರ್ಹ ವರ್ತನೆ ಬಳಿಕ ಇಬ್ಬರು ಅಶಿಸ್ತಿನ ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ” ಎಂದು ದೃಢಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read