ಬಡತನ ದೂರವಾಗಲು ತುಳಸಿ ಗಿಡದ ಬಳಿ ಇವುಗಳನ್ನು ಇಡಿ

ನಾವು ಮಾಡಿದ ಕರ್ಮಗಳಿಗನುಸಾರವಾಗಿ ನಮಗೆ ಜೀವನದಲ್ಲಿ ಕಷ್ಟಸುಖಗಳು ಸಿಗುತ್ತವೆ. ಮನುಷ್ಯನ ಜೀವನದಲ್ಲಿ ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಆದರೆ ಕೆಲವರು ಯಾವಾಗಲೂ ಕಷ್ಟದಲ್ಲೇ ಇರುತ್ತಾರೆ. ಅಂತವರು ತುಳಸಿ ಗಿಡದ ಬಳಿ ಈ ವಸ್ತುವನ್ನಿಟ್ಟು ಪೂಜೆ ಮಾಡಿ.

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನಲಾಗಿದೆ. ಹಾಗಾಗಿ ಹಿಂದೂಗಳು ಮನೆಯ ಎದುರು ತುಳಸಿ ಕಟ್ಟೆ ನಿರ್ಮಿಸುತ್ತಾರೆ. ಅಲ್ಲದೇ ತುಳಸಿ ಕಟ್ಟೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪವಿಟ್ಟು ಪೂಜೆ ಮಾಡುತ್ತಾರೆ.

ಇದರಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ. ಅದರ ಜೊತೆಗೆ ದೀಪದ ಕೆಳಗೆ ಅಕ್ಕಿ ಕಾಳನ್ನು ಹಾಕಿ. ಇದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗಿ ಮನೆಯಲ್ಲಿ ಸುಖ ನೆಲೆಸಿರುವಂತೆ ನೋಡಿಕೊಳ್ಳುತ್ತಾಳೆ.

ಹಾಗೇ ತುಳಸಿ ಗಿಡವನ್ನು ನೆಡುವಾಗ ನೆಲ್ಲಿ ಗಿಡವನ್ನು ಅದರ ಪಕ್ಕದಲ್ಲಿ ನೆಟ್ಟರೆ ಉತ್ತಮ. ಯಾಕೆಂದರೆ ನೆಲ್ಲಿ ಗಿಡದಲ್ಲಿ ಸಾಕ್ಷಾತ್ ಮಹಾವಿಷ್ಣು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಲಕ್ಷ್ಮಿ ನಾರಾಯಣರ ಕೃಪೆಯಿಂದ ಮನೆಯಲ್ಲಿರುವ ಕಷ್ಟಗಳು ಕರಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read