ಅಪರೂಪದ ಗುಲಾಬಿ ಬಣ್ಣದ ಪಾರಿವಾಳ ಪತ್ತೆ; ಫೋಟೋ ವೈರಲ್

ಪಾರಿವಾಳಗಳು ಸಾಮಾನ್ಯವಾಗಿ ಬಿಳಿ , ಬೂದು ಹಾಗೂ ಕಂದು ಬಣ್ಣದಲ್ಲಿ ಇರೋದನ್ನ‌ ನೋಡುತ್ತೇವೆ. ಆದರೆ ಇತ್ತೀಚೆಗೆ ಬ್ರಿಟನ್​ನ ನಗರವೊಂದರಲ್ಲಿ ಗುಲಾಬಿ ಬಣ್ಣದ ಪಾರಿವಾಳವೊಂದು ಗಮನಕ್ಕೆ ಬಂದಿದೆ.

ಈ ಪಾರಿವಾಳವು ಅತ್ಯಂತ ವಿಲಕ್ಷಣವಾದ ಗರಿಗಳನ್ನು ಹೊಂದಿದೆ. ಸ್ಥಳೀಯರಿಂದ ಆಹಾರ ಪಡೆದ ಈ ಪಕ್ಷಿಯು ಮೇಲ್ಛಾವಣಿ ಮೇಲೆ ಕುಳಿತಿರೋದನ್ನು ಕಾಣಬಹುದಾಗಿದೆ. ಇದನ್ನು ನೋಡಿದ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ. ಗ್ರೇಟರ್ ಮ್ಯಾಂಚೆಸ್ಟರ್​ ಪೊಲೀಸ್​ ಅಧಿಕಾರಿಗಳು ಸಹ ಈ ವಿಚಿತ್ರ ಪಕ್ಷಿಯನ್ನು ಗಮನಿಸಿದ್ದಾರೆ ಎನ್ನಲಾಗಿದೆ.

ಈ ಗುಲಾಬಿ ಬಣ್ಣದ ಪಾರಿವಾಳವು ದಿಢೀರ್​ ಕಾಣಿಸಿಕೊಂಡಿರೋದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಹಕ್ಕಿಯ ವಿಶಿಷ್ಟ ಬಣ್ಣವು ಜನರಲ್ಲಿ ಭಾರೀ ಕುತೂಹಲವನ್ನುಂಟು ಮಾಡಿದೆ. ಹಕ್ಕಿಯ ಈ ವಿಶಿಷ್ಟ ಬಣ್ಣವು ನೈಸರ್ಗಿಕವಾಗಿದೆಯೇ ಅಥವಾ ಅದರ ಮೈಗೆ ಯಾವುದಾದರೊಂದು ಬಣ್ಣ ಅಂಟಿರಬಹುದೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಸ್ಥಳೀಯರಾದ 43 ವರ್ಷದ ಸಮಂತಾ ಎಂಬವರು ಈ ವಿಚಾರವಾಗಿ ಮಾತನಾಡಿದ್ದಾರೆ. ಎಲ್ಲರೂ ಗುಲಾಬಿ ಬಣ್ಣದ ಪಾರಿವಾಳವನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಆದರೆ ಯಾರಿಗೊತ್ತು ಇದರ ಮೈಗೆ ಗುಲಾಬಿ ಬಣ್ಣ ಅಂಟಿರಲೂಬಹುದು ಅಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read