ಮೆದುಳಿಗೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ ಅನಾನಸ್

ಅನಾನಸು ಹಸಿಯಾಗಿಯೂ, ಸಾಂಬಾರ್ ರೂಪದಲ್ಲಿಯೂ ಸೇವಿಸಬಹುದಾದ ಅಪರೂಪದ ಹಣ್ಣು. ಇದು ಬಾಯಿ ರುಚಿ ಕೊಡುತ್ತದಲ್ಲದೆ, ಮೆದುಳಿಗೆ ಅಗತ್ಯವಾದ ಮ್ಯಾಂಗನಿಸ್, ಗ್ಲುಕೋಸ್ ನಂತಹ ಅಂಶಗಳನ್ನು ಒಳಗೊಂಡಿದೆ.

ಊಟವಾದ ನಂತರ ಅನಾನಸು ಹಣ್ಣಿಗೆ ಸ್ವಲ್ಪ ಕರಿಮೆಣಸಿನ ಪುಡಿ ಉದುರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಕಾಳುಮೆಣಸಿನ ಪುಡಿ ಹಚ್ಚಿ ಅನಾನಸ್ ಸೇವಿಸುವುದರಿಂದ ಆಮ್ಲ ಪಿತ್ತ ನಿವಾರಣೆಯಾಗುತ್ತದೆ. ಈ ಹಣ್ಣಿನ ನಿಯಮಿತ ಸೇವನೆಯಿಂದ ಗಂಟಲು ಬೇನೆಯಿಂದ ಬಿಡುಗಡೆ ಹೊಂದಬಹುದು.

ಹೃದಯ ದೌರ್ಬಲ್ಯ, ಪಿತ್ತಕೋಶ ಊತ, ಮೂತ್ರಕಟ್ಟುವಿಕೆ, ಕಣ್ಣಿನ ಸುತ್ತ ಊದುವಿಕೆ ಮುಂತಾದ ಸಮಸ್ಯೆಗಳನ್ನು ಈ ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿವಾರಿಸಬಹುದು.

ಅನಾನಸ್ ತಿಂದು ಹಾಲು ಕುಡಿಯಬೇಕು. ಇದರ ಹೊರತಾಗಿ ಬೇರೆ ಏನನ್ನು ಸೇವಿಸಬಾರದು. ಅನಾನಸ್ ಹಣ್ಣಿಗೆ ಕಾಳುಮೆಣಸಿನ ಪುಡಿ ಹಾಕಿ ಸೇವಿಸುವುದರಿಂದ ಕೆಮ್ಮು ಕಫ ಕಡಿಮೆ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read