271 ಪ್ರಯಾಣಿಕರಿದ್ದ ವಿಮಾನ ಟೇಕ್-ಆಫ್ ನಂತರ ಸಾವನ್ನಪ್ಪಿದ ಪೈಲಟ್

271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಫ್ಲೋರಿಡಾದಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನ ಮೂರು ಗಂಟೆಗಳ ಕಾಲ ಹಾರಾಟ ನಡೆಸಿ ಕ್ಯಾಪ್ಟನ್ ಇವಾನ್ ಆಂಡೌರ್ ಅವರು ಅಸ್ವಸ್ಥಗೊಂಡರು. ಅವರು ಬಾತ್ರೂಮ್‌ ನಲ್ಲಿ ಕುಸಿದಿದ್ದರಿಂದ ಸಿಬ್ಬಂದಿಯಿಂದ ವೈದ್ಯಕೀಯ ತುರ್ತು ಚಿಕಿತ್ಸೆ ಪಡೆದರು.

ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಲು ಮೂವತ್ತು ನಿಮಿಷಗಳನ್ನು ತೆಗೆದುಕೊಂಡಿತು.

LATAM ಏರ್ಲೈನ್ಸ್ ಗ್ರೂಪ್ ನಿನ್ನೆ ಮಿಯಾಮಿ-ಸ್ಯಾಂಟಿಯಾಗೊ ಮಾರ್ಗದಲ್ಲಿದ್ದ ಫ್ಲೈಟ್ LA505, ಕಮಾಂಡ್ ಸಿಬ್ಬಂದಿಯ ಮೂವರು ಸದಸ್ಯರಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಪನಾಮದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು. ವಿಮಾನವು ಇಳಿದಾಗ ತುರ್ತು ಸೇವೆಗಳು ಜೀವ ಉಳಿಸುವ ಸಹಾಯ ಒದಗಿಸಿದವು. ಆದರೆ ಪೈಲಟ್ ನಿಧನರಾದರು ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ 25 ವರ್ಷಗಳ ವೃತ್ತಿಜೀವನ ಮತ್ತು ಅವರ ಅಮೂಲ್ಯ ಕೊಡುಗೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ಹಾರಾಟದ ಸಮಯದಲ್ಲಿ ಪೈಲಟ್‌ ಜೀವ ರಕ್ಷಿಸಲು ಅಗತ್ಯವಿರುವ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದೆ.

ಘಟನೆಯ ನಂತರ, ವಿಮಾನವು ಮಂಗಳವಾರ ಪನಾಮ ನಗರದಿಂದ ಚಿಲಿಗೆ ಪ್ರಯಾಣವನ್ನು ಪುನರಾರಂಭಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read