ಕಾಕ್‌ಪಿಟ್ ಒಳಗೆ ಗೆಳತಿಯನ್ನು ಬಿಟ್ಟುಕೊಂಡ ಪೈಲಟ್‌; ಏರ್‌ ಇಂಡಿಯಾಗೆ ಡಿಜಿಸಿಎ ಶೋಕಾಸ್ ನೋಟಿಸ್

Pilot allows female friend into cockpit on Dubai-Delhi flight: DGCA sends notice to Air India CEOದುಬಾಯ್ – ದೆಹಲಿ ಏರ್‌ ಇಂಡಿಯಾ ವಿಮಾನವೊಂದರ ಕಾ‌ಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ತನ್ನ ಸ್ನೇಹಿತೆಯೊಬ್ಬಳಿಗೆ ಅವಕಾಶ ಕೊಟ್ಟ ಪೈಲಟ್‌ ಮಾಡಿದ ಅವಾಂತರದಿಂದ ಸಂಸ್ಥೆಯ ಸಿಇಓ ಕ್ಯಾಂಪ್‌ಬೆಲ್ ವಿಲ್ಸನ್‌ಗೆ ಡಿಜಿಸಿಎ ಶೋಕಾಸ್ ನೋಟಿಸ್ ಕಳುಹಿಸಿದೆ.

ಆಗಸದಲ್ಲಿರುವ ವಿಮಾನದ ಕಾ‌ಕ್‌ಪಿಟ್‌ ಒಳಗೆ ಅನಧಿಕೃತ ಮಂದಿಯನ್ನು ಬಿಡುವಂತಿಲ್ಲ. ಈ ಸಂಬಂಧ ತನಿಖೆಗಳು ಪೂರ್ಣಗೊಳ್ಳುವವರೆಗೂ ಈ ವಿಮಾನದ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ವಿಮಾನದಿಂದ ಆಚೆ ಇಡಲು ಡಿಜಿಸಿಎ ಏರ್‌ ಇಂಡಿಯಾಗೆ ನಿರ್ದೇಶಿಸಿದೆ.

ಟಾಟಾ ಸಮೂಹದ ಮಾಲೀಕತ್ವದ ವಿಮಾನ ಯಾನ ಸಂಸ್ಥೆಯ ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ಹೆನ್ರೀ ಡೊನೋಹೇಗೂ ನೋಟಿಸ್ ಕಳುಹಿಸಲಾಗಿದೆ. ತನ್ನ ಸ್ನೇಹಿತೆಯನ್ನು ಹೀಗೆ ಕಾಕ್‌ಪಿಟ್‌ ಒಳಗೆ ಬಿಟ್ಟುಕೊಂಡ ಪೈಲಟ್‌ ವಿರುದ್ದ ಅದೇ ವಿಮಾನದ ಸಿಬ್ಬಂದಿಯೊಬ್ಬರು ಡಿಜಿಸಿಎಗೆ ದೂರು ಕೊಟ್ಟಿದ್ದಾರೆ.

ಏಪ್ರಿಲ್ 21ರಂದು ಹೊರಡಿಸಲಾದ ಈ ಶೋಕಾಸ್ ನೋಟಿಸ್‌ಗೆ 15 ದಿನಗಳ ಒಳಗೆ ಉತ್ತರಿಸಲು ಏರ್‌ ಇಂಡಿಯಾಗೆ ಡಿಜಿಸಿಎ ಕಾಲಾವಕಾಶ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read