ಅಚ್ಚರಿ: ಅಯ್ಯಪ್ಪನ ದರ್ಶನ ಮಾಡಿ ಮನೆಗೆ ವಾಪಸ್ಸಾದ ಪಾರಿವಾಳ..!

ಚಿತ್ರದುರ್ಗ: ಮಾನವರಂತೆ ಪ್ರಾಣಿ ಪಕ್ಷಿಗಳಿಗೂ ಮನೆ ಅನ್ನೋದು ಇದ್ದೇ ಇರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಪಾರಿವಾಳ ಅಯ್ಯಪ್ಪನ ದರ್ಶನ ಮಾಡಿಕೊಂಡು ಮಾಲಾಧಾರಿಗಳು ಮನೆಗೆ ವಾಪಸ್ ಆಗುವಂತೆ ತನ್ನ ಮನೆಗೆ ವಾಪಸ್ಸಾಗಿದೆ. ಈ ಪಾರಿವಾಳದ ಬುದ್ದಿಗೆ ಇಡೀ ಊರಿನ ಜನ ಆಶ್ಚರ್ಯರಾಗಿದ್ದಾರೆ.

ಈ ಘಟನೆ ನಡೆದಿರೋದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ. ಮೇಗಳಹಟ್ಟಿ ಗ್ರಾಮದ ವೆಂಕಟೇಶ್ ಅವರು ಮಾಲಾಧಾರಿಯಾಗಿದ್ದರು. ಶಬರಿ ಮಲೆಗೆ ಹೋಗುವಾಗ ಈ ಪಾರಿವಾಳವನ್ನೂ ಕರೆದುಕೊಂಡು ಹೋಗಿದ್ದರು. ದರ್ಶನದ ಬಳಿಕ ಪಾರಿವಾಳವನ್ನು ಜ.30 ರಂದು ಶಬರಿಮಲೆಯಲ್ಲಿ ಇದನ್ನು ಹಾರಿ ಬಿಟ್ಟಿದ್ದರು. ವಿಚಿತ್ರ ಎಂದರೆ ನಾಲ್ಕು ದಿನಗಳ ಬಳಿಕ ಆ ಪಾರಿವಾಳ ಮೇಗಳಹಟ್ಟಿ ಗ್ರಾಮಕ್ಕೆ ವಾಪಸ್ಸಾಗಿದೆ.

ಪ್ರಾಣಿ ಪಕ್ಷಿಗಳಲ್ಲಿ ಕೂಡ ಸೂಕ್ಷ್ಮ ಹಾಗೂ ನೆನಪಿನ ಶಕ್ತಿ ಇರುತ್ತದೆ. ಸಾಕಿದ ಅಥವಾ ತರಬೇತಿ ಪಡೆದ ಪಾರಿವಾಳಗಳು ಮಾತ್ರ ಹೀಗೆ ವಾಪಸ್ ಬರಲು ಸಾಧ್ಯ ಎನ್ನುತ್ತಾರೆ ಹಲವರು. ಅದೇನೆ ಇರಲಿ, ಶಬರಿಮಲೆಯಿಂದ ಹಾರಿ ಬಿಟ್ಟ ಪಾರಿವಾಳ ಮತ್ತೆ ಮನೆಗೆ ವಾಪಸ್ ಬಂದಿರೋದು ಮಾತ್ರ ನಿಜಕ್ಕೂ ಆಶ್ಚರ್ಯ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read