ರೈಲಿನಲ್ಲಿ ಪ್ರೇಮಿಗಳ ಚುಂಬನದ ವಿರುದ್ಧ ದೂರು: ದೆಹಲಿ ಮೆಟ್ರೋ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು

ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ರಾಜಧಾನಿಯ ಯುವ ಜನತೆ ಮಾಡುವ ಒಂದಿಲ್ಲೊಂದು ಹರಾಕಿರಿಯ ಕಾರಣದಿಂದ ದೆಹಲಿ ಮೆಟ್ರೋ ಎಂದಾಕ್ಷಣ ನೆಟ್ಟಿಗರಿಗೆ ’ಓಹ್ ಇವತ್ತೇನಪ್ಪಾ!’ ಎನಿಸುವಂತೆ ಆಗಿದೆ.

ಹುಡಾ ಸಿಟಿ ಸೆಂಟರ್‌ ನಿಲ್ದಾಣದ ಬಳಿ ಮೆಟ್ರೋ ರೈಲಿನ ಕಂಪಾರ್ಟ್ಮೆಂಟ್ ಒಂದರಲ್ಲಿ ಜೋಡಿಯೊಂದು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸಬಹುದೇ ಎಂದು ಪ್ರಶ್ನಿಸಿದ ನೆಟ್ಟಿಗರೊಬ್ಬರು ಈ ಫೋಟೋವನ್ನು ಶೇರ್‌ ಮಾಡಿ ದೆಹಲಿ ಮೆಟ್ರೋ ಹಾಗೂ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ದೆಹಲಿ ಮೆಟ್ರೋ, “ಹಾಯ್‌. ಯಾವುದೇ ಅಡಚಣೆಗೆ ವಿಷಾದಿಸುತ್ತೇವೆ. ಹುಡಾ ಸಿಟಿ ಸೆಂಟರ್‌ನಲ್ಲಿ ಪರಿಶೀಲನೆ ಮಾಡಿದ್ದೇವೆ. ಅಂಥ ಯಾವ ಪ್ರಯಾಣಿಕರೂ ಕಂಡು ಬಂದಿಲ್ಲ,” ಎಂದಿದೆ.

ದೆಹಲಿ ಮೆಟ್ರೋದ ಈ ಪ್ರತಿಕ್ರಿಯೆ ನೆಟ್ಟಿಗರಿಗೆ ಸರಿ ಬಂದಂತೆ ಕಾಣುತ್ತಿಲ್ಲ. ಈ ಘಟನೆ ನಡೆದು ಎರಡು ದಿನಗಳು ಕಳೆದ ಬಳಿಕವೂ ಅವರು ಅಲ್ಲಿಯೇ ಇರಲು ತಾನೇ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ ನೆಟ್ಟಿಗರು.

https://twitter.com/Kokchao/status/1669950646173433856?ref_src=twsrc%5Etfw%7Ctwcamp%5Etweetembed%7Ctwterm%5E1669950646173433856%7Ctwgr%5E5444dd23147acf240991cbe2c8c889eac7d30fc8%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-metro-trolled-for-response-to-pic-of-couple-kissing-in-coach-2395595-2023-06-20

https://twitter.com/OfficialDMRC/status/1670710902776287232?ref_src=twsrc%5Etfw%7Ctwcamp%5Etweetembed%7Ctwterm%5E1670710902776287232%7Ctwgr%5E5444dd23147acf240991cbe2c8c889eac7d30fc8%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-metro-trolled-for-response-to-pic-of-couple-kissing-in-coach-2395595-2023-06-20

https://twitter.com/sbgreen17/status/1670716705428111360?ref_src=twsrc%5Etfw%7Ctwcamp%5Etweetembed%7Ctwterm%5E1670716705428111360%7Ctwgr%5E5444dd23147acf240991cbe2c8c889eac7d30fc8%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-metro-trolled-for-response-to-pic-of-couple-kissing-in-coach-2395595-2023-06-20

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read