ವಿವಾಹಿತ ಮಹಿಳೆ ವಿರೋಧಿಸದಿದ್ದರೆ ದೈಹಿಕ ಸಂಬಂಧ ಇಚ್ಛೆಗೆ ವಿರುದ್ಧವಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು

ಅಲಹಾಬಾದ್ ಹೈಕೋರ್ಟ್‌ ಇತ್ತೀಚಿಗೆ ಒಂದು ತೀರ್ಪು ನೀಡಿದ್ದು, ಈ ತೀರ್ಪಿನಲ್ಲಿ, ಲೈಂಗಿಕವಾಗಿ ಅನುಭವಸ್ಥಳಾದ ಒಬ್ಬ ವಿವಾಹಿತ ಮಹಿಳೆ ಪ್ರತಿರೋಧ ತೋರದಿದ್ದರೆ, ಆಕೆಯೊಂದಿಗಿನ ಪುರುಷನ ದೈಹಿಕ ಸಂಬಂಧವನ್ನು ಅವಳ ಇಚ್ಛೆಗೆ ವಿರುದ್ಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಮೊಕದ್ದಮೆಯ ಹಿನ್ನೆಲೆ:

ಈ ಪ್ರಕರಣದಲ್ಲಿ, 30 ವರ್ಷದ ವಿಧವೆಯೊಬ್ಬಳು ತನ್ನ 20 ವರ್ಷದ ಪತಿ ಸಹೋದರನ ವಿರುದ್ದ ದೂರು ದಾಖಲಿಸಿದ್ದು, ಆಕೆಯ ಆರೋಪದ ಪ್ರಕಾರ, ಮದುವೆಯಾಗುವುದಾಗಿ ಭರವಸೆ ನೀಡಿ, ಎರಡು ವರ್ಷಗಳ ಕಾಲ ನಿರಂತರವಾಗಿ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು. ನಂತರ ಆಕೆ ಗರ್ಭಿಣಿಯಾದಾಗ, ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಲ್ಲದೇ ನಂತರ ಸಂಪರ್ಕ ಕಡಿದುಕೊಂಡು ಬೆದರಿಕೆ ಹಾಕಿದಾಗ, ಆಕೆ ದೂರು ದಾಖಲಿಸಿದ್ದಳು.

ನ್ಯಾಯಾಲಯದ ತೀರ್ಪು

ನ್ಯಾಯಾಲಯವು ಗರ್ಭಧಾರಣೆಯ ಬಗ್ಗೆ ವೈದ್ಯಕೀಯ ಪುರಾವೆಗಳಿಲ್ಲ ಎಂದು ಗಮನಿಸಿದ್ದು ಮತ್ತು ಆಕೆ ಆಂತರಿಕ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿದ್ದಾಳೆ ಎಂದು ಹೇಳಿದೆ. ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್, ಆಕೆ ಮೂರು ಮಕ್ಕಳ ತಾಯಿಯಾಗಿದ್ದು, ತನ್ನ ಕ್ರಿಯೆಗಳ ನೈತಿಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾಳೆ ಎಂದು ಹೇಳಿದ್ದಾರೆ. ಪ್ರತಿರೋಧವಿಲ್ಲದೆ ಒಬ್ಬ ಅನುಭವಿ ವಯಸ್ಕನು ಒಂದು ಸಂಬಂಧದಲ್ಲಿ ಭಾಗಿಯಾಗುವುದು ಸಮ್ಮತಿಯ ಸೂಚನೆಯಾಗಿದೆ ಎಂದು ನ್ಯಾಯಾಲಯವು ಒತ್ತಿಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read