ಪತ್ನಿಯ ಖಾಸಗಿ ದೃಶ್ಯ ಸೆರೆ ಹಿಡಿದು ಸ್ನೇಹಿತರಿಗೆ ಫೋಟೋ, ವಿಡಿಯೋ ಸೆಂಡ್ ಮಾಡಿದ ಪತಿ

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಗಮನಕ್ಕೆ ಬಾರದೆ ಖಾಸಗಿ ದೃಶ್ಯ ಸೆರೆಹಿಡಿದು ಸ್ನೇಹಿತರಿಗೆ ಕಳುಹಿಸಿ ವಿಕೃತಿ ಮೆರೆದಿದ್ದಾನೆ.

ಬ್ಯಾಟರಾಯನಪುರ ಠಾಣೆ ಪೊಲೀಸರು ಶೇಖರ್ ಸ್ವಾಮಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 2011ರಲ್ಲಿ ಶೇಖರ್ ಸ್ವಾಮಿಯೊಂದಿಗೆ ಮಹಿಳೆ ಮದುವೆಯಾಗಿದ್ದು, ಕೆಆರ್ ಪುರಂನಲ್ಲಿ ಗಂಡನ ಕುಟುಂಬದವರೊಂದಿಗೆ ವಾಸವಾಗಿದ್ದರು.

ಆಗ ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಖಾಸಗಿ ದೃಶ್ಯಗಳನ್ನು ಶೇಖರ್ ಸ್ವಾಮಿ ಸೆರೆಹಿಡಿದಿದ್ದ. ಈ ವಿಚಾರ ತಿಳಿದ ಮಹಿಳೆ ಗಂಡನೊಂದಿಗೆ ಜಗಳವಾಡಿ ಮೂರು ವರ್ಷಗಳಿಂದ ದೂರವಾಗಿದ್ದಾರೆ. ಪತ್ನಿಗೆ ಕರೆ ಮಾಡಿ ಆರೋಪಿ ತೊಂದರೆ ಕೊಡುತ್ತಿದ್ದ. ನವೆಂಬರ್ 30 ರಂದು ಗಂಡನ ಸ್ನೇಹಿತೆ ಮಹಿಳೆಯನ್ನು ಭೇಟಿಯಾಗಿ ಖಾಸಗಿ ಫೋಟೋ, ವಿಡಿಯೋಗಳನ್ನು ಸ್ನೇಹಿತರಿಗೆ ಕಳುಹಿಸಿರುವ ಬಗ್ಗೆ ತಿಳಿಸಿದ್ದಾಳೆ. ಇದನ್ನು ಗಂಡನ ಬಳಿ ಪ್ರಶ್ನಿಸಿದಾಗ ಅವಾಚ್ಯ ಪದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ. ನೊಂದ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read