ಡಾಲ್ಫಿನ್ ಮೂತಿಯಂತೆ ಕಾಣುವ ಬಂದರಿನ ಡ್ರೋನ್ ಚಿತ್ರ ಶೇರ್‌ ಮಾಡಿಕೊಂಡ ಛಾಯಾಗ್ರಾಹಕ

ಡ್ರೋನ್ ಕ್ಯಾಮೆರಾಗಳ ವ್ಯಾಪಕ ಬಳಕೆಯಿಂದಾಗಿ ಭೂರಮೆಯ ಸೌಂದರ್ಯವನ್ನು ಪಕ್ಷಿನೋಟದಿಂದ ನೋಡಿದಾಗ ಅದೆಷ್ಟು ಸುಂದರ ಎಂಬುದು ಮನುಕುಲಕ್ಕೆ ತಿಳಿಯುತ್ತಿದೆ.

ನಗರ ಪ್ರದೇಶಗಳು, ಕಡಲ ತೀರಗಳು, ಅಳಿವೆ ಪ್ರದೇಶಗಳು, ನದಿ-ತೊರೆಗಳ  ಹರಿವನ್ನು ಡ್ರೋನ್‌ನಲ್ಲಿ ಸೆರೆ ಹಿಡಿದು ನೋಡುವ ಮಜವೇ ಬೇರೆ.

ಬ್ರಿಟನ್‌ನ ಛಾಯಾಗ್ರಾಹಕ ರೈ ಜೋನ್ಸ್‌, ವೇಲ್ಸ್‌ನ ಫುಶೆಲ್ಲಿ ಕಡಲ ತೀರದ ಡ್ರೋನ್‌ ನೋಟದ ಚಿತ್ರವೊಂದನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಫುಶೆಲ್ಲಿ ಬಂದರು ಮೇಲಿನಿಂದ ನೋಡಲು ಥೇಟ್ ಡಾಲ್ಫಿನ್‌ ಮೂತಿಯಂತೆಯೇ ಕಾಣುತ್ತಿದೆ.

“ನಾನು ಇಲ್ಲಿಗೆ ಬಹಳ ಬಾರಿ ಭೇಟಿ ಕೊಟ್ಟಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಇದನ್ನು ಗಮನಿಸಿದ್ದೇನೆ. ಇದೊಂದು ಅದ್ಭುತ ಪತ್ತೆ. ನೀವು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಲು ಇಷ್ಟ ಪಡುತ್ತೀರಿ,” ಎಂದು ಕ್ಯಾಪ್ಷನ್ ಕೊಟ್ಟು ಈ ಚಿತ್ರವನ್ನು ಶೇರ್‌ ಮಾಡಿದ್ದಾರೆ ಜೋನ್ಸ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read