ಬೆಂಗಳೂರು: ಮಹಿಳಾ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ಪಿಜಿಗಳಿಗೆ ಹೊಸ ನಿಯಮ ಹಾಗೂ ಮಾರ್ಗಸೂಚಿ ಜಾರಿಗೊಳಿಸಿದ್ದಾರೆ.
ನಗರದ ಎಲ್ಲಾ ಪಿಜಿಗಳ ಡೇಟಾ ಸಂಗ್ರಹಕ್ಕೆ, ಭದ್ರತೆ ಬಗ್ಗೆ ಮಾಹಿತಿ ಪಡೆಯುವಂತೆ ಆಯಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಗಳಿಗೆ ಕಮೀಷ್ನರ್ ಬಿ.ದಯಾನಂದ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಪಿಜಿ ಗುರುತಿಸಲು ಹಾಗೂ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ಪಿಜಿಗಳು ಪಾಲಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಪಿಜಿಗಳಲ್ಲಿ ಸಿಸಿಟಿವಿ ಅಳವಡಿಕೆ
 ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜನೆ
 ಪಿಜಿಯಲ್ಲಿ ವಾಸ ಮಾಡುವವರ ಡೇಟಾ ಕಲೆಕ್ಟ್ ಅಗತ್ಯ
 ಪಿಜಿಯಲ್ಲಿರುವವರು ಕೆವೈಸಿ ಮಾಡಿಸಬೇಕು
 ಹೊಸ ಸಾಫ್ಟ್ ವೇರ್ ನಲ್ಲಿ ಎಲ್ಲಾ ಮಾಹಿತಿ ಅಪ್ ಲೋಡ್ ಆಗಬೇಕು
 ಮಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು
 ಪಿಜಿ ಆಹಾರದ ಗುಣಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು
 ಪಿಜಿ ಟ್ರೇಡ್ ಲೈಸನ್ಸ್ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಬೇಕು
 ಅನಧಿಕೃತ ಪಿಜಿಗಳ ಬಗ್ಗೆ ಬಿಬಿಎಂಪಿಗೆ ಮಾಹಿತಿ
 ಅಕ್ರಮ, ಅನೈತಿಕ ಚಟುವಟಿಗಳು ನಡೆಯುತ್ತಿದ್ದರೆ ಮಾಹಿತಿ ನೀಡಬೇಕು
 ತಿಂಗಳಿಗೊಮ್ಮೆ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ
 ಬಿಬಿಎಂಪಿ ಅಧಿಕಾರಿಗಳ ಜೊತೆ ಕೇಸ್ ದಾಖಲಿಸಬೇಕು
 ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು

 
			 
		 
		 
		 
		 Loading ...
 Loading ... 
		 
		 
		