ಬೆಂಗಳೂರು: MBA, MCA, ME, M.Tech, M.Arch ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.
ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಲಿಂಕ್ ಬಿಡುಗಡೆ ಮಾಡಿದ್ದು, ಸೆ.28ರವರೆಗೆ ಅವಕಾಶ ಇರುತ್ತದೆ. ಸೆ.29ರಂದು ಅಣಕು ಫಲಿತಾಂಶ ಪ್ರಕಟ. ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅ.3ರವರೆಗೆ ಅವಕಾಶ ಇರುತ್ತದೆ. ಅ.3ರಂದು ಸಂಜೆ 5ಗಂಟೆಗೆ ತಾತ್ಕಾಲಿಕ ಫಲಿತಾಂಶ ಪ್ರಕಟ. ಅ.4ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದವರು ಪೋಷಕರ ಜತೆ ಚರ್ಚಿಸಿ, ಛಾಯ್ಸ್ ದಾಖಲಿಸಲು ಅ.7ರವರೆಗೆ ಅವಕಾಶ ಇರುತ್ತದೆ. ಛಾಯ್ಸ್-1, ಛಾಯ್ಸ್-2 ದಾಖಲಿಸಿದವರು ಶುಲ್ಕ ಕಟ್ಟಬೇಕು. ಛಾಯ್ಸ್-1 ದಾಖಲಿಸಿದವರು ಅ.9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
#MBA, #MCA, #ME, #M.Tech, #M.Arch ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಇಂದು ಲಿಂಕ್ ಬಿಡುಗಡೆ ಮಾಡಿದ್ದು, ಸೆ.28ರವರೆಗೆ ಅವಕಾಶ ಇರುತ್ತದೆ. ಸೆ.29ರಂದು ಅಣಕು ಫಲಿತಾಂಶ ಪ್ರಕಟ. ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಅ.3ರವರೆಗೆ ಅವಕಾಶ… pic.twitter.com/aBm8NDNMB4
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) September 24, 2025