ʼಪೆಟ್ರೋಲಿಯಂ ಜೆಲ್ಲಿʼ ಹೆಚಿಸುತ್ತೆ ಕೂದಲಿನ ಸೌಂದರ್ಯ

ಪೆಟ್ರೋಲಿಯಂ ಜೆಲ್ಲಿಯನ್ನು ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಬಳಸಿ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಅದು ಯಾವುದೆಂಬುದನ್ನು ತಿಳಿಯೋಣ.

-ಪೆಟ್ರೋಲಿಯಂ ಜೆಲ್ಲಿಯನ್ನು ಕೂದಲಿನ ಸೌಂದರ್ಯಕ್ಕೆ ಬಳಸಬಹುದು. ಇದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಕೂದಲ ತುದಿ ಕವಲೊಡೆದಿದ್ದರೆ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿ ಒಂದು ಗಂಟೆ ಬಿಟ್ಟು ಕೂದಲನ್ನು ವಾಶ್ ಮಾಡಿ. ಇದರಿಂದ ಸೀಳು ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

-ಪೆಟ್ರೋಲಿಯಂ ಜೆಲ್ಲಿಯನ್ನು ತಲೆಗೆ ಹಚ್ಚುವುದರಿಂದ ಹೇನುಗಳ ಸಮಸ್ಯೆ ದೂರವಾಗುತ್ತದೆ. ಇದು ಹೇನು ಮರಿಮೊಟ್ಟೆ ಮಾಡದಂತೆ ತಡೆಯುತ್ತದೆ. ಇದರಿಂದ ತಲೆಯಲ್ಲಾಗುವ ಹೇನುಗಳನ್ನು ನಿಯಂತ್ರಿಸಬಹುದು.

-ಕಣ್ಣಿನ ಮೇಕಪ್ ತೆಗೆಯಲು ಪೆಟ್ರೋಲಿಯಂ ಜೆಲ್ಲಿ ಸಹಕಾರಿ. ಕಣ್ಣನ್ನು ಮುಚ್ಚಿಕೊಂಡು ಹೊರಗಡೆ ಮಸಾಜ್ ಮಾಡಿದರೆ ಕಣ್ಣಿನ ಮೇಕಪ್ ಹೋಗುತ್ತದೆ. ಮತ್ತು ಬಿರುಕು ಬಿಟ್ಟ ತುಟಿ, ಹಿಮ್ಮಡಿ, ಕೈಕಾಲಿಗೆ ಇದನ್ನು ಹಚ್ಚಿದರೆ ಈ ಸಮಸ್ಯೆಯಿಂದ ದೂರವಿರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read