ಕಚ್ಚಾ ತೈಲ ದರ ಭಾರಿ ಇಳಿಕೆ: ಪೆಟ್ರೋಲ್ 11 ರೂ., ಡೀಸೆಲ್ 6 ರೂ. ಕಡಿತ ಸಾಧ್ಯತೆ

ನವದೆಹಲಿ: ಕಚ್ಚಾ ತೈಲ ದರ ಭಾರಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರತಿ ಲೀ. ಪೆಟ್ರೋಲ್ ನಿಂದ 11 ರೂ., ಡೀಸೆಲ್ ನಿಂದ 6 ರೂಪಾಯಿ ಉಳಿತಾಯವಾಗುತ್ತಿದ್ದು, ದರ ಕಡಿತ ಮಾಡುವ ಸಾಧ್ಯತೆ ಇದೆ.

ಜಾಗತಿಕ ಬೆಳವಣಿಗೆಗಳ ಆಧರಿಸಿ ಕಚ್ಚಾ ತೈಲ ಬೇಡಿಕೆ ಕುಸಿತ ಕಂಡಿರುವುದರಿಂದ ದರ  ಕೂಡ ಕಡಿಮೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 11 ರೂ., ಡೀಸೆಲ್ ಮೇಲೆ 6 ರೂಪಾಯಿ ಭರ್ಜರಿ ಲಾಭ ಸಿಗುತ್ತಿದೆ. ಕಳೆದ ಹಲವು ತಿಂಗಳಿನಿಂದ ಭಾರಿ ಪ್ರಮಾಣದಲ್ಲಿ ತೈಲ ಕಂಪನಿಗಳು ಬೊಕ್ಕಸ ತುಂಬಿಸಿಕೊಂಡಿವೆ.

ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೆ ಮೊದಲು ತೈಲ ದರ ಇಳಿಕೆ ಮಾಡಿ ಜನಸಾಮಾನ್ಯರ ಮನವೊಲಿಕೆಗೆ ಮುಂದಾಗಲಿದೆ. ಇಂಧನ ದರ ಕಡಿತ ಹಣದುಬ್ಬರ ಇಳಿಕೆಗೂ ಕಾರಣವಾಗುವುದರಿಂದ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್ ಗೆ 80 ಡಾಲರ್ ಗಿಂತ ಕಡಿಮೆ ಇದ್ದು, ಕೇಂದ್ರ ಸರ್ಕಾರ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read