ಮನೆಯೊಡತಿ ಜೊತೆ ಫೋನ್​ನಲ್ಲಿ ಮಾತನಾಡುವ ನಾಯಿ: ಭಾವುಕ ವಿಡಿಯೋ ವೈರಲ್​

ನಾಯಿಗಿಂತ ಉತ್ತಮ ಸಂಗಾತಿ ಮತ್ತೊಂದಿಲ್ಲ ಎನ್ನಬಹುದು. ಮಾತು ಬರದಿದ್ದರೂ ಅದು ತೋರುವ ಭಾವನೆಗಳಿಗೆ ಕೊನೆಯೇ ಇಲ್ಲ. ತನ್ನ ಮಾಲೀಕರನ್ನು ಉಳಿಸಲು ತಾನೂ ಪ್ರಾಣ ಕೊಡಲು ಸಿದ್ಧರಾಗಿರುವ ಹಲವು ನಾಯಿಗಳ ಕಥೆ ಕೇಳಿರಬಹುದು. ತನ್ನ ಒಡೆಯರು ದೂರ ಹೋದರೆ ಅದರ ನೋವನ್ನು ತನ್ನದೇ ಆದ ಪರಿಯಲ್ಲಿ ನಾಯಿ ಅನುಭವಿಸುತ್ತದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ಕ್ಯೂಟಿ ಭಾನು ಎಂಬ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಗುಡ್ಡು ಎಂಬ ನಾಯಿ ತಮ್ಮ ಮನೆಯೊಡತಿಯ ಜೊತೆ ಫೋನ್​ನಲ್ಲಿ ಮಾತನಾಡುವುದನ್ನು ನೋಡಬಹುದು. ನೀನು ಇಲ್ಲದೇ ನಾಯಿ ಅಳುತ್ತಿದೆ ಎಂದು ಫೋನ್​ ಮಾಡಿದವಳು ಹೇಳಿದಾಗ, ಅತ್ತ ಕಡೆಯಿಂದ ಮಹಿಳೆ ನಿಜಕ್ಕೂ ನಿನಗೆ ಬೇಜಾರು ಆಗ್ತಿದೆಯಾ ಎಂದು ಕೇಳುತ್ತಾಳೆ. ನಾಯಿ ತಲೆ ಅಲ್ಲಾಡಿಸುತ್ತದೆ.

ಮನೆಯೊಡತಿ, ಅಳಬೇಡ, ನಾನು ಬೇಗ ಬರುತ್ತೇನೆ. ನಿನಗಾಗಿ ಚೀಸ್​ ತರುತ್ತೇನೆ ಎಂದು ಸಮಾಧಾನ ಪಡಿಸಲು ತೊಡಗಿದಾಗ ನಾಯಿ ಮೇಲ್ಮುಖ ಮಾಡಿ ನಿಜಕ್ಕೂ ಅಳುವುದನ್ನು ವಿಡಿಯೋದಲ್ಲಿ ನೋಡಬಹುದು. ಪ್ರಾಣಿಗಳ ಪ್ರೀತಿಗೆ ಎಂಥವರೂ ಫಿದಾ ಆಗುವುದು ಗ್ಯಾರೆಂಟಿ. ಇಡೀ ಕ್ಷಣವು ತುಂಬಾ ಹೃದಯಸ್ಪರ್ಶಿಯಾಗಿರುವುದನ್ನು ನೋಡಬಹುದು.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 4 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

https://www.youtube.com/watch?v=u5OTgS6nFeQ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read