ʼವೇಪ್ ಪೋಡ್ʼ ನುಂಗಿದ ಶ್ವಾನಕ್ಕೆ ಶಸ್ತ್ರ ಚಿಕಿತ್ಸೆ ಮೂಲಕ ಮರುಜನ್ಮ ನೀಡಿದ ವೈದ್ಯರು…!

ಇಂಗ್ಲೆಂಡ್‌ನಲ್ಲಿ 13 ವರ್ಷದ ನಾಯಿಯೊಂದು ವೇಪ್ ಪೋಡ್ ನುಂಗಿದ ಕಾರಣ ಆಪರೇಷನ್ ಮಾಡುವ ಮೂಲಕ ಪ್ರಾಣ ಉಳಿಸಲಾಗಿದೆ. ಡಾಲಿ ಎಂಬ ಹೆಸರಿನ ಈ ನಾಯಿ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿತ್ತು. ಯಾವಾಗಲೂ ಚಟುವಟಿಕೆಯಿಂದ ಓಡಾಡುವ ಡಾಲಿ ಇದ್ದಕ್ಕಿದ್ದಂತೆ ಮಂಕಾಗಿ ಒಂದೇ ಕಡೆ ಮಲಗುವಂತೆ ಆಗಿತ್ತು. ಇದರಿಂದ ಅನುಮಾನಗೊಂಡ ಮಾಲೀಕರು ಡಾಲಿಯನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋದರು.

ಪಶುವೈದ್ಯರು ಡಾಲಿಯನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಏನೋ ಸಿಕ್ಕಿಹಾಕಿಕೊಂಡಿರುವುದು ಕಂಡುಬಂತು. ಎಕ್ಸ್‌ರೇ ತೆಗೆದು ನೋಡಿದಾಗ ಡಾಲಿಯ ಹೊಟ್ಟೆಯಲ್ಲಿ ನಿಕೋಟಿನ್ ತುಂಬಿದ ವೇಪ್ ಪೋಡ್ ಇರುವುದು ಪತ್ತೆಯಾಯಿತು. ತಕ್ಷಣವೇ ಪಶುವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ವೇಪ್ ಪೋಡ್ ಅನ್ನು ಹೊರತೆಗೆದರು.

ವೇಪ್ ಪೋಡ್ ಡಾಲಿಯ ಹೊಟ್ಟೆಯ ಒಳಗೆ ನಿಕೋಟಿನ್ ಅನ್ನು ಬಿಡುಗಡೆ ಮಾಡಿದ್ದರೆ, ಅದು ಪ್ರಾಣಾಪಾಯಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಹಾಗಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಡಾಲಿ ಈಗ ಸಂಪೂರ್ಣವಾಗಿ ಗುಣಮುಖವಾಗಿದೆ. (ವ್ಯಾಪಿಂಗ್” ಎನ್ನುವುದು ಇ-ಸಿಗರೇಟ್ ಅಥವಾ ವೇಪ್ ಪೆನ್‌ಗಳಂತಹ ಇತರ ಆವಿಯಾಗುವ ಸಾಧನಗಳಿಂದ ಉತ್ಪತ್ತಿಯಾಗುವ ಇ-ಸಿಗರೆಟ್‌ಗಳನ್ನು ಕಂಪನಿಗಳು ಅಭಿವೃದ್ಧಿಪಡಿಸಿದ್ದು, ಸಿಗರೇಟ್ ಸೇದುವವರಿಗೆ ಸಹಾಯ ಮಾಡಲು ಹೊಸ ಆಯ್ಕೆಯಾಗಿದೆ)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read