ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ‘ರಾಹುಕಾಲ’ದಲ್ಲಿ ಮಾಡಿ ಈ ಪೂಜೆ

ಸಾಮಾನ್ಯವಾಗಿ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಯಾಕೆಂದರೆ ರಾಹುಕಾಲ ತುಂಬಾ ಕೆಟ್ಟದು ಎಂಬ ನಂಬಿಕೆ ಇದೆ. ಆದರೆ ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ರಾಹುಕಾಲದಲ್ಲಿ ಈ ಪೂಜೆಯನ್ನು ಮಾಡಬೇಕಾಗುತ್ತದೆ.

ಜಾತಕದಲ್ಲಿ ರಾಹುಕೇತು ದೋಷವಿದ್ದರೆ ನಮಗೆ ಎಲ್ಲಾ ಕೆಲಸದಲ್ಲಿ ಧಕ್ಕೆ ಉಂಟಾಗುತ್ತದೆ. ಸಮಾಜದಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಯಾವುದೇ ಕಾರ್ಯದಲ್ಲೂ ಯಶಸ್ಸು ಸಿಗುವುದಿಲ್ಲ. ಆದಕಾರಣ ಈ ರಾಹುಕೇತುಗಳ ಪ್ರಭಾವವನ್ನು ಕಡಿಮೆ ಮಾಡಲು ರಾಹುಕಾಲದಲ್ಲಿ ಪೂಜೆ ಮಾಡಿ.

ದುರ್ಗಾದೇವಿ ರಾಹುಕೇತು ಗ್ರಹಕ್ಕೆ ಅಧಿದೇವತೆ. ಆದಕಾರಣ ಶುಕ್ರವಾರ ಅಥವಾ ಮಂಗಳವಾರದಂದು ರಾಹುಕಾಲದ ಸಮಯದಲ್ಲಿ 9 ವಾರಗಳ ಕಾಲ ದುರ್ಗಾದೇವಿಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ದೇವಿಯ ಅನುಗ್ರಹ ದೊರೆತು ಈ ರಾಹುಕೇತು ದೋಷದಿಂದ ಮುಕ್ತಿ ಹೊಂದಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read