ಈ ರಕ್ತದ ಗುಂಪಿನವರಿಗಿದೆ ಹೆಚ್ಚು ʼಹೃದಯಾಘಾತʼವಾಗುವ ಸಂಭವ

ಈಗಿನ ಜೀವನ ಪದ್ಧತಿಯಿಂದಾಗಿ ಹೃದಯಾಘಾತದ ಸಂಖ್ಯೆ ಹೆಚ್ಚಾಗುತ್ತಿದೆ.  ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೃದಯಾಘಾತದ ಅಪಾಯ ಇದೆ.

ಹೃದಯಾಘಾತ, ಹೃದಯ ಸಂಬಂಧಿ ಖಾಯಿಲೆ ಅನ್ನೋದು ಒಂದು ಗಂಭೀರ ಸಮಸ್ಯೆಯಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ ಅಂದರೆ ರೋಗಿ ಸಾಯೋದು ಗ್ಯಾರಂಟಿ.

ಅವೈಜ್ಞಾನಿಕ ಜೀವನ ಕ್ರಮ, ಒತ್ತಡ, ವಯಸ್ಸು ಇವೆಲ್ಲವೂ ಹೃದಯಾಘಾತಕ್ಕೆ ಕಾರಣವಾಗಿದೆ. ಇನ್ನು ಯಾವ ರಕ್ತದ ಗುಂಪು ಹೊಂದಿರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು ಅಂತಾ ಕೇಳಿದ್ರೆ ಒ ರಕ್ತ ಮಾದರಿಗೆ ಸೇರಿಲ್ಲದವರು ಹೃದಯದ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಹೇಳಿದೆ ಹೊಸ ಅಧ್ಯಯನ.

4 ಲಕ್ಷ ಮಂದಿಯ ಮೇಲೆ ನಡೆಸಲಾದ ಅಧ್ಯಯನವನ್ನ ಆಧರಿಸಿದ ಸಂಶೋಧಕರು ಈ ಫಲಿತಾಂಶವನ್ನ ಬಹಿರಂಗಪಡಿಸಿದ್ದಾರೆ. ಇದರನ್ವಯ ಒ ರಕ್ತ ಮಾದರಿಗೆ ಹೋಲಿಸಿದ್ರೆ ಎ ಹಾಗೂ ಬಿ ರಕ್ತ ಮಾದರಿ ಹೊಂದಿರುವವರಿಗೆ ಹೃದಾಯಾಘಾತದ ಅಪಾಯ 8 ಪ್ರತಿಶತ ಹೆಚ್ಚಿರುತ್ತೆ.

ಅದರಲ್ಲೂ ಬಿ ರಕ್ತ ಮಾದರಿ ಹೊಂದಿರುವವರಿಗೆ ಹೃದಯಾಘಾತದ ಅಪಾಯ ಅತೀ ಹೆಚ್ಚು ಅನ್ನುತ್ತೆ ಅಧ್ಯಯನ. ಅದೇ ರೀತಿ ಒ ರಕ್ತ ಮಾದರಿಗೆ ಹೋಲಿಸಿದ್ರೆ ಎ ರಕ್ತ ಮಾದರಿ ಹೊಂದಿರುವವರಿಗೆ ಹೃದಾಯಾಘಾತದ ಅಪಾಯ 11 ಪ್ರತಿಶತ ಹೆಚ್ಚಿರುತ್ತೆ.

ಅನಿಯಮಿತ ಆಹಾರ ಪದ್ಧತಿ, ಜಂಕ್​ ಫುಡ್​ಗಳ ಸೇವನೆ, ಮಸಾಲೆಯುಕ್ತ ಆಹಾರ ಇವೆಲ್ಲವೂ ಹೃದಾಯಾಘಾತ ಉಂಟಾಗಲು ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡ ಕೂಡ ಹೃದಯಾಘಾತ ಉಂಟು ಮಾಡಬಲ್ಲದು. ಅನವಶ್ಯಕ ಒತ್ತಡ ಕೂಡ ಹೃದಯದ ಆರೋಗ್ಯಕ್ಕೆ ಮಾರಕ. ಮಾನಸಿಕ ಒತ್ತಡ ಇವೆಲ್ಲವೂ ಹೃದಯದ ಸ್ವಾಸ್ಥ್ಯವನ್ನ ಹಾಳುಗೆಡವಬಲ್ಲವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read