ಮಾನಸಿಕ ಕಾಯಿಲೆಗಳಿರುವವರಲ್ಲಿ ಜೈವಿಕ ಮುಪ್ಪಾಗುವಿಕೆ ಜೋರು: ಅಧ್ಯಯನ ವರದಿಯಲ್ಲಿ ಬಹಿರಂಗ

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವೊಂದರ ಪ್ರಕಾರ ಜಗತ್ತಿನ ಪ್ರತಿ ಎಂಟು ಮಂದಿಯಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದಾರೆ. ಅಂದರೆ ಒಂದು ಶತಕೋಟಿ ಮಂದಿಗೆ ಈ ಸಮಸ್ಯೆ ಇದೆ ಎಂದಾಯಿತು.

ಮಾನಸಿಕ ಕಾಯಿಲೆಗಳು ದೈಹಿಕವಾಗಿ ಮುಪ್ಪು ಆವರಿಕೆಯನ್ನು ಇನ್ನಷ್ಟು ತ್ವರಿತಗೊಳಿಸುವ ಸಾಧ್ಯತೆಗಳಿವೆ ಎಂದು ಲಂಡನ್‌ನ ಕಿಂಗ್ಸ್ ಕಾಲೇಜೊಂದರ ವರದಿಯೊಂದು ತಿಳಿಸುತ್ತಿದೆ.

“ರಕ್ತದ ಚಯಾಪಚಯ ಕ್ರಿಯೆಗಳ ಮೂಲಕ ಜನನರ ವಯಸ್ಸನ್ನು ಕಂಡು ಹಿಡಿಯಲು ಈಗ ಸಾಧ್ಯವಿದೆ. ಮಾನಸಿಕ ಕಾಯಿಲೆಗಳ ಇತಿಹಾಸವಿರುವ ಮಂದಿಯ ವಾಸ್ತವಿಕ ವಯಸ್ಸನ್ನು ಅವರ ಚಯಾಪಚಯದ ಮಟ್ಟಗಳು ತೋರುತ್ತವೆ ಎಂದು ನಮಗೆ ತಿಳಿದು ಬಂದಿದೆ. ಉದಾಹರಣೆಗೆ, ಬೈಪೋಲಾರ್‌ ಸಮಸ್ಯೆ ಇರುವ ಮಂದಿಗೆ ತಮ್ಮ ವಾಸ್ತವಿಕ ವಯಸ್ಸಿಗಿಂತಲೂ ಎರಡು ವರ್ಷಗಳ ಹೆಚ್ಚು ವಯಸ್ಸಾದಂತೆ ಕಾಣುತ್ತದೆ ಎಂದು ಅವರ ರಕ್ತದ ಚಯಾಪಚಯದ ಪರೀಕ್ಷೆಗಳು ತಿಳಿಸುತ್ತವೆ,” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಅಧ್ಯಯನದ ಭಾಗವಾಗಿ, ಯುಕೆ ಬಯೋಬ್ಯಾಂಕ್‌ನಲ್ಲಿ ನೋಂದಣಿಯಾಗಿರುವ ದತ್ತಾಂಶದಿಂದ 1,10,780 ಮಂದಿಯ ರಕ್ತ ಚಯಾಪಚಯ ವಿಶ್ಲೇಷಣೆಗಳನ್ನು ಮಾಡಲಾಗಿದೆ.

ರಕ್ತ ಚಯಾಪಚಯದ ಕ್ರಿಯೆಯ ಭಾಗವಾಗಿ ಬಿಡುಗಡೆಯಾಗುವ ಮೆಟಬಾಲೈಟ್‌ಗಳು ವಿವಿಧ ರೋಗಗಳಿಗೆ ನೀಡುವ ಚಿಕಿತ್ಸೆಯ ಪ್ರಗತಿಯನ್ನು ಅರಿಯಲು ಬಳಸಬಹುದಾಗಿದೆ. ಮಾನಸಿಕ ಕಾಯಿಲೆಗಳಿರುವ ಜನರ ಮೆಟಬಾಲೈಟ್‌ಗಳ ಮಟ್ಟಗಳು ಅವರ ಜೈವಿಕ ವಯಸನ್ನು ಇನ್ನಷ್ಟು ಹೆಚ್ಚಿಸುವಂತೆ ಕಂಡು ಬಂದಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read