ಮದುವೆಯಾದ ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಮದುವೆಯಾದವರು ಅಥವಾ ಪರಸ್ಪರ ಸಂಬಂಧದಲ್ಲಿರುವವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಇಂಥವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂದು ಅಧ್ಯಯನ ಒಂದರಲ್ಲಿ ಬಹಿರಂಗವಾಗಿದೆ.

ಕೆನಡಾದ ಲಕ್ಸೆಮ್ಬರ್ಗ್ ವಿಶ್ವವಿದ್ಯಾಲಯ ಹಾಗೂ ಒಟ್ಟಾವ ವಿಶ್ವವಿದ್ಯಾಲಯದ ತಜ್ಞರು ಈ ಅಧ್ಯಯನವನ್ನು ನಡೆಸಿದ್ದು, ಮದುವೆಯಾದವರು ಅಥವಾ ಸಂಬಂಧದಲ್ಲಿ ರುವವರು ತಮ್ಮ ಬದುಕಿನಲ್ಲಿ ಅಸಮಾಧಾನ ಹೊಂದಿದ್ದರೂ ಸಹ ಅಂಥವರನ್ನು ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂಬುದು ಕಂಡುಬಂದಿದೆ.

ಈ ಹಿಂದೆ ನಡೆದ ಅಧ್ಯಯನ ಒಂದರಲ್ಲಿ ಮದುವೆಯಾಗಿ ಸಂತಸದ ಜೀವನ ನಡೆಸುತ್ತಿರುವವರು ಉತ್ತಮ ಆರೋಗ್ಯ ಹೊಂದಿರುವುದು ಕಂಡುಬಂದಿತ್ತು. ಇದಕ್ಕೆ ಪೂರಕವಾಗಿ ಈಗ ನಡೆಸಿದ ಅಧ್ಯಯನದಲ್ಲಿ ಮದುವೆಯಾದವರು ಅಥವಾ ಸಂಬಂಧದಲ್ಲಿರುವವರಿಗೆ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಎಂಬುದು ತಿಳಿದು ಬಂದಿದೆ.

50 ರಿಂದ 89 ವಯಸ್ಸಿನ 3,335 ವ್ಯಕ್ತಿಗಳ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಈ ಪೈಕಿ ಶೇಕಡಾ 76 ಮಂದಿ ಮದುವೆಯಾದವರು ಅಥವಾ ಸಂಬಂಧದಲ್ಲಿದ್ದವರು ಇದ್ದರು. ಇನ್ನು ವೈವಾಹಿಕ ಬದುಕಿನಲ್ಲಿ ಸಂತಸದಿಂದ ಇರುವವರಿಗೆ ಆರೋಗ್ಯ ಲಾಭ ಹೆಚ್ಚು ಎಂಬುದು ಸಹ ಕಂಡುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read