ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಭಯಾನಕ ಅನುಭವ; ಬೆಚ್ಚಿಬೀಳಿಸುತ್ತೆ ವೈರಲ್ ವಿಡಿಯೋ !

ಪ್ರೀ ವೆಡ್ಡಿಂಗ್ ಫೋಟೋಶೂಟ್ ಇತ್ತೀಚಿನ ದಿನಗಳಲ್ಲಿ ಭಾರತೀಯ ಮದುವೆಗಳಲ್ಲಿ ರೂಢಿಯಾಗಿದೆ. ಜೊತೆಗೆ ಇದು ನವಜೋಡಿಯ ಫ್ಯಾಷನ್ ಆಗಿದೆ. ಚಿತ್ರ ವಿಚಿತ್ರವಾಗಿ, ವಿಭಿನ್ನ ವಿಶೇಷ, ಸೃಜನಶೀಲತೆಯ ಪರಿಕಲ್ಪನೆಗಳೊಂದಿಗೆ ನವಜೋಡಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇತ್ತೀಚಿಗೆ ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ನವಜೋಡಿ ಭಯಾನಕ ಕ್ಷಣವನ್ನ ಕಂಡಿದ್ದಾರೆ.

ಹೆಚ್ಚು ಸೂರ್ಯನ ಬೆಳಕಿಲ್ಲದ ಕತ್ತಲೆಯಂತಹ ಪ್ರದೇಶವದು. ನೀರು ತುಂಬಿರುವ ಆಳವಿಲ್ಲದ ಕೊಳದಲ್ಲಿ ಕುಳಿತಿರುವ ಜೋಡಿ ಫೋಟೋಗೆ ಪೋಸ್ ನೀಡುತ್ತಿರುತ್ತಾರೆ. ವಿಡಿಯೋಗ್ರಾಫರ್, ಫೋಟೋಗ್ರಾಫರ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುವಾಗ ಅನಿರೀಕ್ಷಿತವಾಗಿ ಹಾವೊಂದು ಕೊಳದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಿದ ಕ್ಯಾಮೆರಾಮ್ಯಾನ್ ಗಾಬರಿಯಾಗುತ್ತಾರೆ. ವಧು ಸಹ ಕಿರುಚಲು ಮುಂದಾಗುತ್ತಾಳೆ. ಈ ವೇಳೆ ವರ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುತ್ತಾನೆ. ಬಳಿಕ ಹಾವು ಸ್ಥಳದಿಂದ ಹೊರಟುಹೋಗುತ್ತದೆ.

“ವಿವಾಹಪೂರ್ವದ ಚಿತ್ರೀಕರಣದ ನಡುವಿನ ಭಯಾನಕ ಮತ್ತು ತಮಾಷೆಯ ಕ್ಷಣಗಳು” ಎಂದು ಘಟನೆಯ ಕ್ಲಿಪ್ ಅನ್ನು ಫೋಟೋಗ್ರಾಫರ್ ಹಂಚಿಕೊಂಡಿದ್ದಾರೆ.

ಈ ವಿಡಿಯೋ 4.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗೊಳಗಾಗಿದೆ. ಅನೇಕರು ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ ನವಜೋಡಿಯನ್ನ ಶ್ಲಾಘಿಸಿದ್ದರೆ, ಕೆಲವರು ಮಾನವ ವರ್ಸಸ್ ಪ್ರಾಣಿಗಳು ಎಂದು ಕಮೆಂಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read