ಚಲಿಸುತ್ತಿದ್ದ ಬೈಕ್​ನಲ್ಲಿ ಕುಳಿತು ಲ್ಯಾಪ್​ಟಾಪ್​ ನಲ್ಲಿ ಯುವತಿ ಕೆಲಸ; ನೆಟ್ಟಿಗರು ಶಾಕ್​

ಆಧುನಿಕ ಜೀವನದ ಜಂಜಾಟದಲ್ಲಿ ವೈಯಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರವನ್ನು ಸರಿದೂಗಿಸುವುದೇ ಒಂದು ಸವಾಲಿನ ಕೆಲಸವಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂಥ ಘಟನೆಯೊಂದು ಬೆಂಗಳೂರಿನ ಬೀದಿಯೊಂದರಲ್ಲಿ ಕಂಡು ಬಂದಿದೆ. ರೆಡ್ಡಿಟ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದ್ದು ಸಖತ್​ ವೈರಲ್​ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ನಕ್ಕಿದರೆ ಇನ್ನೂ ಹಲವರು ಈಗಿನ ಜಮಾನ ಮನುಷ್ಯನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿದ್ದ ಬೈಕ್​ನ ಮೇಲೆ ಕುಳಿತ ಯುವತಿಯೊಬ್ಬರು ಲ್ಯಾಪ್​ಟಾಪ್​ ಓಪನ್​ ಮಾಡಿಕೊಂಡು ಕೆಲಸ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಏನೆಂದರೆ ಈ ಯುವತಿ ಹೆಲ್ಮೆಟ್​ ಧರಿಸಿಲ್ಲ. ಅತಿಯಾದ ಕೆಲಸ ಮನುಷ್ಯನನ್ನು ಯಾವ ಹಂತಕ್ಕೆ ತಲುಪಿಸಿದೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ರೆಡಿಟ್​ನಲ್ಲಿ ಅನೇಕರ ಗಮನ ಸೆಳೆದಿದೆ. ಜೀವಕ್ಕೆ ಸುರಕ್ಷತೆಯಿಲ್ಲದ ಕೆಲಸಗಳನ್ನು ಯಾಕೆ ಮಾಡಬೇಕು ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ಇದು ಸಾಯಲು ಹೊಸ ಆಯ್ಕೆಯಾಗಿದೆ ಅಷ್ಟೇ ಎಂದು ಕಿಡಿಕಾರಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read