ತಿರುಪತಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ಭಾನುವಾರ ತಿರುಮಲ ದೇವಸ್ಥಾನದಲ್ಲಿ ಮುಡಿ ಅರ್ಪಿಸಿದ್ದಾರೆ.
ಇತ್ತೀಚೆಗೆ ಸಿಂಗಾಪುರದ ಶಾಲೆಯಲ್ಲಿ ನಡೆದ ಬೆಂಕಿ ಅಪಘಾತದಲ್ಲಿ ತಮ್ಮ ಮಗ ಸುಟ್ಟಗಾಯಗಳಿಗೆ ಒಳಗಾದಾಗ ಅವರು ಕೈಗೊಂಡ ಹರಕೆ ತೀರಿಸಲು ಕೊನಿಡೇಲಾ ಮುಡಿ ಕೊಟ್ಟಿದ್ದಾರೆ.
ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಇತ್ತೀಚೆಗೆ ಸಿಂಗಾಪುರದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದಾಗ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಪ್ರಿಲ್ 8 ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.
ಶಂಕರ್ ಅವರನ್ನು ಉಳಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯ ಸಂಕೇತವಾಗಿ, ಅನ್ನಾ ಕೊನಿಡೇಲಾ ತನ್ನ ತಲೆ ಕೂದಲನ್ನು ಅರ್ಪಿಸಿದರು. ಸಂಪ್ರದಾಯಕ್ಕೆ ಅನುಗುಣವಾಗಿ, ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ತನ್ನ ಕೂದಲನ್ನು ಅರ್ಪಿಸಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿದ್ದರು ಎಂದು ಜನಸೇನಾ ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ರಷ್ಯಾದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಆಗಿರುವ ಅನ್ನಾ, ಗಾಯತ್ರಿ ಸದನದಲ್ಲಿ ದೇವಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಘೋಷಣೆ ನಮೂನೆಗಳಿಗೆ ಸಹಿ ಹಾಕಿದರು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿಯಮಗಳ ಪ್ರಕಾರ, ವೆಂಕಟೇಶ್ವರನ ಭೇಟಿ ಮತ್ತು ಆಚರಣೆಗಳಲ್ಲಿ ಭಾಗವಹಿಸುವ ಮೊದಲು ಭಗವಾನ್ ವೆಂಕಟೇಶ್ವರನ ಮೇಲಿನ ತನ್ನ ನಂಬಿಕೆಯನ್ನು ದೃಢಪಡಿಸಿದ್ದಾರೆ.
#WATCH | Tirupati, Andhra Pradesh | Anna Lezhneva, wife of Andhra Pradesh Deputy CM Pawan Kalyan, visits and offers prayers at Sri Venkateswara Temple in Tirumala. pic.twitter.com/cT80znEttc
— ANI (@ANI) April 14, 2025